ಕೊರೋನಾ ಸೊಂಕಿತರಿಗೆ ಆಕ್ಸಿಜನ್ ಸಮಸ್ಯೆ ಅತೀವವಾಗಿ ಕಾಡುತ್ತಿದೆ. ಚಾಮರಾಜನಗರ ದುರಂತ ಕಣ್ಣೇದುರೇ ಇದೆ.
ಬೆಂಗಳೂರು (ಜೂ. 11): ಕೊರೋನಾ ಸೊಂಕಿತರಿಗೆ ಆಕ್ಸಿಜನ್ ಸಮಸ್ಯೆ ಅತೀವವಾಗಿ ಕಾಡುತ್ತಿದೆ. ಚಾಮರಾಜನಗರ ದುರಂತ ಕಣ್ಣೇದುರೇ ಇದೆ. 'ಆಕ್ಸಿಜನ್ ಸಿಗದೇ ತಂದೆಯನ್ನು ಕಳೆದುಕೊಂಡ ಮಗಳ ಕರುಣಾಜನಕ ಕಥೆ ಇದು. 'ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಸಿಕ್ಕಿದ್ದರೆ ನನ್ನ ತಂದೆ ಬದುಕುತ್ತಿದ್ದರು' ಎಂದು ಮಗಳು ಕಣ್ಣೀರಿಟ್ಟಿದ್ಧಾಳೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಜೈಶಂಕರ್ ಎಂಬುವವರು ಮೃತಪಟ್ಟಿದ್ದಾರೆ. ರಾತ್ರೋರಾತ್ರಿ ಆಸ್ಪತ್ರೆಯಿಂದ ಶವವನ್ನು ಹಸ್ತಾಂತರ ಮಾಡಲಾಗಿದೆ. ಜೊತೆಗೆ ಆಕ್ಸಿಜನ್ ಸಿಗದೇ ಮೃತಪಟ್ಟವರ ಪಟ್ಟಿಯಲ್ಲೂ ಇವರ ಹೆಸರಿಲ್ಲ. ಜಿಲ್ಲಾಸ್ಪತ್ರೆಯಿಂದ ಇದೆಂಥಾ ಯಡವಟ್ಟು..?