May 12, 2021, 12:15 PM IST
ಬೆಂಗಳೂರು (ಮೇ. 12): ಮಹಾರಾಷ್ಟ್ರದಲ್ಲಿ ಸೇರಿದಂತೆ ಬೇರೆ ಬೇರೆ ಕಡೆ ಕಂಡು ಬಂದಿರುವ ಬ್ಲಾಕ್ ಫಂಗಸ್ ಸಮಸ್ಯೆ ಬೆಂಗಳೂರಿನಲ್ಲಿಯೂ ಪತ್ತೆಯಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್‌ರನ್ನು ಪ್ರಶ್ನಿಸಿದಾಗ, 'ನಮ್ಮ ತಾಂತ್ರಿಕ ಸಮಿತಿ ತಂಡದ ಜೊತೆ ಚರ್ಚಿಸಿದ್ದೇನೆ. ಒಂದೆರಡು ದಿನಗಳಲ್ಲಿ ವರದಿ ಬರಬಹುದು. ಅದರ ಮೇಲೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕೆಂದು ತೀರ್ಮಾನಿಸುತ್ತೇವೆ' ಎಂದಿದ್ದಾರೆ.