ದೇಣಿಗೆ ಸಂಗ್ರಹಕ್ಕೆ ನಾನು ವಿರೋಧ ವ್ಯಕ್ತಪಡಿಸಿಲ್ಲ. ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳ ವಿರುದ್ಧವೂ ಯಾವುದೇ ಆರೋಪ ಮಾಡಿಲ್ಲ. ಪಾರದರ್ಶಕವಾಗಿ ಹಣ ಸಂಗ್ರಹ ಮಾಡಲಿ. ಇದಕ್ಕೆ ನಮ್ಮ ಅಭ್ಯಂತರ ಇಲ್ಲ: ಎಚ್‌ಡಿಕೆ
ಬೆಂಗಳೂರು (ಫೆ. 18): ದೇಣಿಗೆ ಸಂಗ್ರಹಕ್ಕೆ ನಾನು ವಿರೋಧ ವ್ಯಕ್ತಪಡಿಸಿಲ್ಲ. ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳ ವಿರುದ್ಧವೂ ಯಾವುದೇ ಆರೋಪ ಮಾಡಿಲ್ಲ. ಪಾರದರ್ಶಕವಾಗಿ ಹಣ ಸಂಗ್ರಹ ಮಾಡಲಿ. ಇದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ, ಕೆಲವು ಪೋಲಿ-ಪುಂಡರು ಹಣ ಸಂಗ್ರಹಿಸುತ್ತಿದ್ದಾರೆ. ಇದಕ್ಕೆ ಅನುಮತಿ ಕೊಟ್ಟವರು ಯಾರು? ರಾಮನ ಹೆಸರಲ್ಲಿ ಕೆಲವರು ಧಾರ್ಮಿಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ದೇಣಿಗೆ ನೀಡುವ ವಿಚಾರದಲ್ಲಿ ನನಗೇ ಬೆದರಿಕೆ ಹಾಕುತ್ತಿದ್ದರೆ ಸಾಮಾನ್ಯ ಜನರ ಪಾಡೇನು’ ಎಂದು ಎಚ್‌ಡಿಕೆ ಪ್ರಶ್ನಿಸಿದ್ದಾರೆ.
ರಾಮಮಂದಿರ ನಿರ್ಮಾಣಕ್ಕಾಗಿ ನನ್ನ ಬಳಿಯೂ ದೇಣಿಗೆ ಕೇಳಲು ಬಂದಿದ್ದರು. ಆದರೆ, ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಿಸಿದರೆ ಕೊಡುವುದಿಲ್ಲ, ಬೇರೆಡೆ ಕಟ್ಟಿದರೆ ದೇಣಿಗೆ ಕೊಡುತ್ತೇನೆ ಎಂದು ಹೇಳಿ ಕಳುಹಿಸಿದೆ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.