ಹಾನಗಲ್‌ನಲ್ಲಿ ಪಂಚಮಸಾಲಿ ರ್ಯಾಲಿಯಲ್ಲಿ ಜನಸಾಗರ, ಕೋವಿಡ್ ನಿಯಮಗಳಿಗೇ ಇಲ್ಲಿ ಕಿಮ್ಮತ್ತೇ ಇಲ್ಲ..! ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹಾನಗಲ್ ಕುಮಾರೇಶ್ವರ ಸಭಾಭವನದಲ್ಲಿ ಬೃಹತ್ ಸಮಾವೇಶ ನಡೆದಿದೆ.
ಹಾವೇರಿ (ಸೆ. 04): ಹಾನಗಲ್‌ನಲ್ಲಿ ಪಂಚಮಸಾಲಿ ರ್ಯಾಲಿಯಲ್ಲಿ ಜನಸಾಗರ, ಕೋವಿಡ್ ನಿಯಮಗಳಿಗೇ ಇಲ್ಲಿ ಕಿಮ್ಮತ್ತೇ ಇಲ್ಲ..! ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹಾನಗಲ್ ಕುಮಾರೇಶ್ವರ ಸಭಾಭವನದಲ್ಲಿ ಬೃಹತ್ ಸಮಾವೇಶ ನಡೆದಿದೆ. ನೂರಾರು ಜನರಿಂದ ಸಭಾಭವನ ತುಂಬಿ ಹೋಗಿತ್ತು. ಸಾಮಾಜಿಕ ಅಂತರ ಇಲ್ಲ, ಮಾಸ್ಕ್ ಇಲ್ಲದೇ ಸಮಾವೇಶ ನಡೆದಿದೆ.
3 ನೇ ಅಲೆ ವೇಗವಾಗಿ ಹರಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. 3 ನೇ ಅಲೆ ತಡೆಗೆ ಸರ್ಕಾರ ಕೂಡಾ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಹೀಗಿರುವಾಗ ಈ ರೀತಿ ಸಮಾವೇಶ ನಡೆಸುವುದು ಎಷ್ಟು ಸರಿ ಎಂಬ ಸಾರ್ವಜನಿಕ ವಲಯದಲ್ಲಿ ಎದ್ದಿದೆ.