Oct 10, 2020, 3:07 PM IST
ಬೆಂಗಳೂರು (ಅ. 10): ರಸ್ತೆ ಕಾಮಗಾರಿ ಮಾಡೋಕೆ, ಸೇತುವೆ ಕಟ್ಟಿಸೋಕೆ, ಶಿಥಿಲಗೊಂಡಿರುವ ಸೇತುವೆ ರಿಪೇರಿ ಮಾಡಿಸೋಕೆ ಸರ್ಕಾರ ನಿರ್ಲಕ್ಷ್ಯ ವಹಿಸೋದನ್ನ ನಾವು ಅನೇಕ ಕಡೆ ನೋಡುತ್ತೇವೆ. ಹಾವೇರಿಯಲ್ಲಿ 150 ಕ್ಕೂ ಹೆಚ್ಚು ವರ್ಷಗಳ ಹಿಂದೆ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ ವರದಾ ಸೇತುವೆ ಶಿಥಿಲಗೊಂಡಿದೆ.
ಹುಬ್ಬಳ್ಳಿ- ಧಾರವಾಡ BRTS ಗೆ ಕಳಪೆ ಕಾಮಗಾರಿ ಸಂಕಟ!
40 ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ ಈ ಸೇತುವೆ. ಜನರು, ವಾಹನ ಸವಾರರು ಜೀವ ಕೈಯಲ್ಲಿಡುದು ಸಂಚರಿಸಬೇಕಾಗಿದೆ. ಗೋಡೆಗಳು ಬಿರುಕು ಬಿಟ್ಟಿದ್ದು, ಅಧಿಕಾರಿಗಳು ಮಾತ್ರ ಡೋಂಟ್ ಕೇರ್ ಅನ್ನುತ್ತಿದ್ದಾರೆ. ಜನರು ಎಷ್ಟೇ ಮನವಿ ಮಾಡಿದರೂ ಅಧಿಕಾರಿಗಳು ಮಾತ್ರ ತಮಗಲ್ಲವೇನೋ ಅನ್ನುವಂತಿದ್ದಾರೆ. ಈ ಸೇತುವೆಯನ್ನು ನೋಡಿದರೆ ಅಪಾಯ ಕಣ್ಣೆದುರಲ್ಲಿಯೇ ಕಾಣಿಸುತ್ತಿದೆ.