ಹಲಾಲ್ ವಿರುದ್ಧ ಬಿಜೆಪಿ ಸಮರ.. ಶುರುವಾಗುತ್ತಾ ಹೊಸ ಸಂಘರ್ಷ..? ಏನಿದು ಹಲಾಲ್ ವಿವಾದ..?

Dec 8, 2023, 3:47 PM IST

ಉತ್ತರ ಪ್ರದೇಶದಲ್ಲಿ ಬ್ಯಾನ್ ಆಗಿದ್ದಾಯ್ತು. ಕರ್ನಾಟಕದಲ್ಲೂ ಬ್ಯಾನ್ ಆಗುತ್ತಾ ಹಲಾಲ್ ಸರ್ಟಿಫಿಕೇಟ್..? ಇಸ್ಲಾಂ ಧರ್ಮದ ಹಲಾಲ್ ಪದ್ಧತಿಯ ವಿರುದ್ಧ ಸಿಡಿದೆದ್ದ ಕೇಸರಿ ಪಕ್ಷ. ರಾಜ್ಯದಲ್ಲಿ ಹಲಾಲ್ ನಿಷೇಧಕ್ಕೆ ಬಿಜೆಪಿ(BJP) ಆಗ್ರಹ. ರಾಜ್ಯದಲ್ಲಿ ಮತ್ತೆ ಹಲಾಲ್ ದಂಗಲ್ ಶುರುವಾಗಿದೆ. ಕಳೆದ ವಿಧಾನಸಭಾ ಚುನಾವಣೆಗೂ ಮೊದ್ಲು ಕರ್ನಾಟಕದಲ್ಲಿ(Karnataka) ಭಾರೀ ಸದ್ದು ಮಾಡಿದ್ದ ಹಲಾಲ್ ವಿವಾದ ಮತ್ತೆ ಎದ್ದು ಕೂತಿದೆ. ಅವತ್ತು ಸದ್ದು ಮಾಡಿದ್ದು ಹಲಾಲ್ ಕಟ್ ವಿರುದ್ಧ ಝಟ್ಕಾ ಕಟ್ ಅಭಿಯಾನ, ಇವತ್ತು ಹಲಾಲ್ ಬ್ಯಾನ್(Halal ban) ಸದ್ದು. ಉತ್ತರ ಪ್ರದೇಶ( Uttar Pradesh) ಮಾದರಿಯಲ್ಲಿ ರಾಜ್ಯದಲ್ಲೂ ಹಲಾಲ್ ಬ್ಯಾನ್ ಮಾಡ್ಬೇಕು ಅಂತ ಬಿಜೆಪಿ ಹೋರಾಟ ಶುರು ಮಾಡಿದೆ. ಈ ಬಗ್ಗೆ ಬಿಜೆಪಿ ಎಂಎಲ್'ಸಿ ಸದಸ್ಯ ರವಿಕುಮಾರ್, ವಿಧಾನ ಪರಿಷತ್'ನಲ್ಲಿ ಖಾಸಗಿ ಬಿಲ್ ಮಂಡಿಸಿದ್ದಾರೆ. ಹಲಾಲ್ ಅನ್ನೋದು ಇಸ್ಲಾಂ ಧರ್ಮಕ್ಕೆ ಸಂಬಂಧ ಪಟ್ಟದ್ದು. ಇಸ್ಲಾಂ ಧರ್ಮದಲ್ಲಿ(Islam) ಹಲಾಲ್'ಗೆ ತನ್ನದೇ ಆದ ಮಹತ್ವವಿದೆ. ಕಟ್ಟರ್ ಮುಸ್ಲಿಮರು ಹಲಾಲ್'ಗೆ ಒಳಪಟ್ಟ ಆಹಾರ ಪದಾರ್ಥಗಳನ್ನು ಬಿಟ್ಟು, ಬೇರೆ ಯಾವುದನ್ನು ತಿನ್ನೋದೇ ಇಲ್ಲ. ದಿನಬಳಕೆಯ ವಸ್ತುಗಳ ವಿಚಾರದಲ್ಲೂ ಅಷ್ಟೇ.. ಅದೂ ಕೂಡ ಹಲಾಲ್ ಸರ್ಟಿಫೈಯ್ಡ್ ಆಗಿರ್ಲೇಬೇಕು. ಹಾಗಂತ ಹಲಾಲ್ ವ್ಯಾಪ್ತಿ ಈಗ ಮುಸ್ಲಿಮರಿಗಷ್ಟೇ ಸೀಮತವಾಗಿಲ್ಲ. ಅದು ಹಿಂದೂಗಳು ಸೇರಿದಂತೆ ಇತರ ಧರ್ಮದ ಜನರಿಗೂ ವ್ಯಾಪಿಸಿದೆ. ಇದನ್ನೇ ಮುಂದಿಟ್ಟುಕೊಂಡು ರಾಜ್ಯದಲ್ಲಿ ಬಿಜೆಪಿ ಹಲಾಲ್ ವಿರುದ್ಧ ಧ್ವನಿ ಎತ್ತಿದೆ. ಹಲಾಲ್'ಗೆ ಧರ್ಮದ ಲೇಪನ ಬಳಿಯಲಾಗಿದೆ ಅಂತ ಆರೋಪಿಸಿರುವ ಬಿಜೆಪಿ, ಹಲಾಲನ್ನು ರಾಜ್ಯದಲ್ಲಿ ನಿಷೇಧ ಮಾಡ್ಬೇಕು ಅಂತ ಆಗ್ರಹಿಸಿದೆ.

ಇದನ್ನೂ ವೀಕ್ಷಿಸಿ:  ಆತನ ಗೆಲುವು ಬರೆದಿತ್ತು ಇತಿಹಾಸ! ಮಗನ ಸಾವಿಗೆ ಚುನಾವಣಾ ರಣಕಣದಲ್ಲಿ ನ್ಯಾಯ ಪಡೆದ ತಂದೆ!