ದೀಪಾವಳಿಗೆ ಹಸಿರು ಪಟಾಕಿ ಹೊಡೆಯಲು ಸರ್ಕಾರ ಅನುಮತಿ ನೀಡಿದೆ. ಹಾಗಂತ ಬೇಕಾಬಿಟ್ಟಿ ಹೊಡೆಯುವಂತಿಲ್ಲ. ಹಸಿರು ಪಟಾಕಿಯೂ ಸೇಫಲ್ಲ. ಇದರಲ್ಲೂ ರಾಸಾಯನಿಕಗಳಿವೆ.
ಬೆಂಗಳೂರು (ನ. 14): ದೀಪಾವಳಿಗೆ ಹಸಿರು ಪಟಾಕಿ ಹೊಡೆಯಲು ಸರ್ಕಾರ ಅನುಮತಿ ನೀಡಿದೆ. ಹಾಗಂತ ಬೇಕಾಬಿಟ್ಟಿ ಹೊಡೆಯುವಂತಿಲ್ಲ. ಹಸಿರು ಪಟಾಕಿಯೂ ಸೇಫಲ್ಲ. ಇದರಲ್ಲೂ ರಾಸಾಯನಿಕಗಳಿವೆ. ಇದರಲ್ಲಿರುವ ಬೇರಿಯಂ ನೈಟ್ರೇಟ್ ಪರಿಸರಕ್ಕೆ ಹಾನಿ ಮಾಡುತ್ತದೆ. ಹಾಗಾಗಿ ಹಿತಮಿತವಾಗಿ ಬಳಸಬೇಕು ಎಂದು ಆವಾಜ್ ಫೌಂಡೇಶನ್ ಸಲಹೆ ನೀಡಿದೆ.
ಯಾವುದೇ ಪಟಾಕಿ ಇರಬಹುದು. ಬೇಕಾಬಿಟ್ಟಿ ಹೊಡೆಯದೇ ಮಿತವಾಗಿ ಬಳಸಿದರೆ ಪರಿಸರಕ್ಕೂ ಒಳ್ಳೆಯದು, ನಮ್ಮ ಆರೋಗ್ಯಕ್ಕೂ ಒಳ್ಳೆಯದು!