ಸರ್ಕಾರ ಉಚಿತವಾಗಿ ಕಾರ್ಮಿಕರನ್ನು ಊರಿಗೆ ಕಳಿಸಬೇಕು: ಸಿದ್ದರಾಮಯ್ಯ

May 2, 2020, 3:21 PM IST

ಬೆಂಗಳೂರು(ಮೇ.02): ರಾಜ್ಯ ಸರ್ಕಾರ ಕೂಲಿ-ಕಾರ್ಮಿಕರನ್ನು ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳಲು ಅವಕಾಶ ಮಾಡಿಕೊಟ್ಟಿದೆ. ಇದಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ಗಳನ್ನು ನಿಯೋಜಿಸಿದೆ. ಆದರೆ ಕೆಎಸ್‌ಆರ್‌ಟಿ ವತಿಯಿಂದ ಡಬಲ್ ದರ ನಿಗದಿಪಡಿಸುವ ಮೂಲಕ ಪ್ರಯಾಣಿಕರ ಸುಲಿಗೆ ಮಾಡಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಕಾರ್ಮಿಕರು ಊರಿಗೆ ಹೋಗಬೇಕಿದೆ. ಅವರ ಬಳಿ ಬಸ್ ಚಾರ್ಜ್ ಕೊಡಲು ಹಣವೆಲ್ಲಿದೆ. ಅವರನ್ನೆಲ್ಲ ಸರ್ಕಾರವೇ ಉಚಿತವಾಗಿ ಕರೆದುಕೊಂಡು ಹೋಗಿ ಸುರಕ್ಷಿತವಾಗಿ ಬಿಟ್ಟು ಬರಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಸಿಎಂ-ಜಿಲ್ಲಾಧಿಕಾರಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದ ಪ್ರಮುಖಾಂಶಗಳು..!

ಸುವರ್ಣ ನ್ಯೂಸ್ ಲಾಕ್‌ಡೌನ್ ಸುಲಿಗೆ ಬಗ್ಗೆ ನಿರಂತರವಾಗಿ ಸುದ್ದಿ ಪ್ರಸಾರ ಮಾಡುತ್ತಿದೆ. ಕೆಎಸ್‌ಆರ್‌ಟಿಸಿ ದುಪ್ಟಟ್ಟು ಹಣ ಸುಲಿಗೆ ಮಾಡುತ್ತಿರುವುದರ ಬಗ್ಗೆ ರಿಯಾಲಿಟಿ ಚೆಕ್ ಕೂಡಾ ನಡೆಸಿತ್ತು. ಸುವರ್ಣ ನ್ಯೂಸ್ ಅಭಿಯಾನಕ್ಕೆ ಇದೀಗ ಮಾಜಿ ಸಿಎಂ ಕೂಡ ದ್ವನಿಗೂಡಿಸಿದ್ದಾರೆ.