Feb 4, 2022, 5:16 PM IST
ಇಂದಿನ ಪ್ರಮುಖ ವಿಚಾರಗಳೇನು..? ಏನೆಲ್ಲಾ ಅಪ್‌ಡೇಟ್ಸ್‌ಗಳಿವೆ ಎಂದು ನೋಡುವುದಾರೆ, ಹೈದರಾಬಾದಿನಲ್ಲಿ ನಿರ್ಮಿಸಲಾದ 216 ಅಡಿ ಎತ್ತರದ ವಿಶ್ವದ 2ನೇ ಅತಿದೊಡ್ಡ ರಾಮಾನುಜಾಚಾರ್ಯರ ಪ್ರತಿಮೆಯನ್ನು ಫೆ.5 ರ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ.
ದೇಶದ ಆರ್ಥಿಕತೆ ಮೇಲೆ ನಿಗಾ ಇಡುವ ಚಿಂತಕರ ಚಾವಡಿ, ನಿರುದ್ಯೋಗ ದರ ತೋರಿಸುವ ಪಟ್ಟಿ ಬಿಡುಗಡೆ ಮಾಡಿದ್ದು, ಕಡಿಮೆ ನಿರುದ್ಯೋಗಿಗಳನ್ನು ಹೊಂದಿದ ರಾಜ್ಯಗಳ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 8.72 ಲಕ್ಷ ಹುದ್ದೆಗಳು ಖಾಲಿಯಿವೆ ಎಂದು ರಾಜ್ಯಸಭೆಗೆ ಸಿಬ್ಬಂದಿ ರಾಜ್ಯ ಸಚಿವ ಜೀತೇಂದ್ರ ಕುಮಾರ್ ಹೇಳಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ 75 ಕೋಟಿ ರು. ವೆಚ್ಚದಲ್ಲಿ ಅತ್ಯಾಧುನಿಕ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ.