Dec 10, 2021, 12:34 PM IST
ಬೆಂಗಳೂರು (ಡಿ. 10): ಹೆಲಿಕಾಪ್ಟರ್ ದುರಂತದಲ್ಲಿ (IAF Chopper Crash) ದುರ್ಮರಣವನ್ನಪ್ಪಿದ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್‌ಗೆ (Bipin Rawat) ಇಡೀ ದೇಶ ಕಂಬನಿ ಮಿಡಿದಿದೆ. ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸಿದ ವೀರ ಸೇನಾನಿಯನ್ನು ಕಳೆದುಕೊಂಡು ಇಡೀ ದೇಶ ಬಡವಾಗಿದೆ. ರಾವತ್ ಜೀಗೂ ಕೊಡಗು (Kodagu) ಜಿಲ್ಲೆಗೂ ಅವಿನಾಭವ ಸಂಬಂಧವಿದೆ. ಜಿಲ್ಲೆಗೆ ಮೂರು ಬಾರಿ ಭೇಟಿ ನೀಡಿದ್ದ ಜನರಲ್ ಬಿಪಿನ್ ರಾವತ್ ಮಡಿಕೇರಿಯ (Madikeri) ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ (Gen Thimmaih) ತಮ್ಮದೇ ಆದ ಕೊಡುಗೆ ನೀಡಿದ್ದರು. ಅವರ ನಿಧನ ಕೊಡಗು ಜಿಲ್ಲೆಯಲ್ಲೂ ಆಘಾತ ಉಂಟು ಮಾಡಿದ್ದು, ಜಿಲ್ಲೆಯ ಸೇನಾನಿಗಳು ಕಂಬನಿ ಮಿಡಿದಿದ್ದಾರೆ.
News Hour ಹೆಲಿಕಾಪ್ಟರ್ ದುರಂತದ ಕೊನೆ ಕ್ಷಣಗಳು.. ರಾವತ್‌ಗೆ ಅಂತಿಮ ನಮನ
ಕೊಡಗಿನ ಸೈನಿಕ ಪರಂಪರೆಯ ಬಗ್ಗೆ ಮೆಚ್ಚುಗೆ ಹೊಂದಿದ್ದ ಅವರಿಗೆ ಫೀ.ಮಾ.ಕೆ.ಎಂ.ಕಾರ್ಯಪ್ಪ (K M Karyappa) ಹಾಗೂ ಜನರಲ್ ತಿಮ್ಮಯ್ಯ ಬಗ್ಗೆ ಅಪಾರ ಅಭಿಮಾನವಿತ್ತು. ಅಧಿಕೃತವಾಗಿ 3 ಬಾರಿ (2016, 2017 ಹಾಗೂ 2021) ಜಿಲ್ಲೆಗೆ ಭೇಟಿ ನೀಡಿದ್ದರು. ಅಲ್ಲದೆ 2021ರ ಫೆ.6ರಂದು ಜ.ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆಯ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೊಡಗಿಗೆ ಬರಲು ರಾವತ್ ಕಾರಣರಾಗಿದ್ದರು.
ಜಿಲ್ಲೆಯಲ್ಲಿನ ಹಿರಿಯ ಸೇನಾಧಿಕಾರಿಗಳಾದ ಲೆ.ಜ.ಬಿ.ಸಿ.ನಂದ, ಲೆ.ಜ.ಸೋಮಣ್ಣ ಹಾಗೂ ಫೀ.ಮಾ.ಕೆ.ಎಂ.ಕಾರ್ಯಪ್ಪ, ಜ.ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಸುಬ್ಬಯ್ಯ ಹಾಗೂ ಸಂಚಾಲಕ ಮೇಜರ್ ಬಿದ್ದಂಡ ನಂಜಪ್ಪ ಅವರೊಂದಿಗೆ ಹೆಚ್ಚಿನ ಬಾಂಧವ್ಯ ಹೊಂದಿದ್ದರು. ಜ.ತಿಮ್ಮಯ್ಯ ಮ್ಯೂಸಿಯಂಗೆ ಯುದ್ಧ ಟ್ಯಾಂಕ್, ಉಪಕರಣಗಳನ್ನು ಕಳುಹಿಸಿಕೊಟ್ಟಿದ್ದಷ್ಟೇ ಅಲ್ಲದೆ .10 ಲಕ್ಷ ನೀಡಿದ್ದರು. ಜಿಲ್ಲೆಯಲ್ಲಿ ವಾರ್ ಮೆಮೋರಿಯಲ್ ನಿರ್ಮಾಣ ವೇಳೆಯೂ ಬಿಪಿನ್ .5 ಲಕ್ಷ ನೀಡಿದ್ದರು ಎಂದು ಮಾಹಿತಿ ನೀಡಿದರು.