Sep 2, 2021, 3:18 PM IST
ಬೆಂಗಳೂರು (ಸೆ. 02): ಪೆಟ್ರೋಲ್, ಡಿಸೇಲ್ ಬೆಲೆ, ಗ್ಯಾಸ್ ಬೆಲೆ ಏರಿಕೆ ಬಗ್ಗೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೋನಾ ಸವಾಲಿನ ನಡುವೆಯೂ ಜಿಡಿಪಿ ಏರಿಕೆ: ಮೋದಿ ಕಾರಣ ಎಂದ ಆರ್‌ಸಿ!
'ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವಿದ್ಯುತ್ ತೆರಿಗೆ, ಸೈಟ್ ತೆರಿಗೆ ಹೆಚ್ಚಾಗಿದೆ. 2014 ರಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದರು. ಈ ದೇಶವನ್ನು ಸ್ವರ್ಗ ಮಾಡುತ್ತೇನೆಂಬ ಭ್ರಮೆಯನ್ನು ಹುಟ್ಟಿಸಿದರು. ಯುವಕರನ್ನು, ರೈತರನ್ನು, ಜನಸಾಮಾನ್ಯರನ್ನು ದಾರಿ ತಪ್ಪಿಸಿದರು. ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅಚ್ಚೇ ದಿನ್ ಬರುತ್ತದೆ ಎಂದು ಭರವಸೆ ಮೂಡಿಸಿದರು. ಆದರೆ ಅದ್ಯಾವುದೂ ಆಗಿಲ್ಲ. ಎಲ್ಲದರ ಬೆಲೆಯೂ ಹೆಚ್ಚಾಗಿದೆ. ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ. ದೇಶದ ಆರ್ಥಿಕತೆಯನ್ನು ದಿವಾಳಿ ಮಾಡಿದ್ದಾರೆ' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.