Flag Row: ರಾಷ್ಟ್ರಧ್ವಜ ವಿವಾದ, ಮುಸ್ಲಿಂ ಗೂಂಡಾ ಹೇಳಿಕೆ, ನಾನು ಸಿಂಹ ರೀ ಎಂದ ಈಶ್ವರಪ್ಪ

Feb 23, 2022, 12:16 PM IST

ಬೆಂಗಳೂರು (ಫೆ. 23): ರಾಷ್ಟ್ರಧ್ವಜ ಹೇಳಿಕೆ ವಿಚಾರವಾಗಿ ಈಶ್ವರಪ್ಪನವರನ್ನು (KS Eshwarappa)  ಸಂಪುಟದಿಂದ ವಜಾಗೊಳಿಸಬೇಕೆಂದು ಕಾಂಗ್ರೆಸ್ ಅಹೋರಾತ್ರಿ ಪ್ರತಿಭಟನೆ ಮಾಡುತ್ತಿದೆ. ಸದನದಲ್ಲೂ ಈ ವಿಚಾರ ಬಹಳ ಸದ್ದು ಮಾಡುತ್ತಿದೆ. ಇಂತಹ ಪ್ರತಿಭಟನೆಗೆಲ್ಲಾ ನಾವು ಬಗ್ಗಲ್ಲ, ಜಗ್ಗಲ್ಲ ಎಂದು ಈಗಾಗಲೇ ಈಶ್ವರಪ್ಪ ಹೇಳಿದ್ದಾರೆ. ಈಶ್ವರಪ್ಪ ರಾಷ್ಟ್ರದ್ರೋಹ ಹೇಳಿಕೆ ಕೊಟ್ಟಿಲ್ಲ, ಹಾಗಾಗಿ ವಜಾಗೊಳಿಸುವ ಪ್ರಶ್ನೆಯೇ ಇಲ್ಲವೆಂದು ಸರ್ಕಾರ ಸ್ಪಷ್ಟಪಡಿಸಿದೆ. 

Flag Row: ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸ್ತೀವಿ ಎಂದಿಲ್ಲ: ಈಶ್ವರಪ್ಪ

ಶಿವಮೊಗ್ಗ ಕಾಲೇಜಿನಲ್ಲಿ ತ್ರಿವರ್ಣ ಧ್ವಜ ತೆಗೆದು ಕೇಸರಿ ಬಾವುಟ ಹಾರಿಸಿಲ್ಲ. ರಾಷ್ಟ್ರ ಧ್ವಜಕ್ಕೆ ಏನು ಗೌರವ ಕೊಡಬೇಕು ಅದನ್ನು ದೇಶದಲ್ಲಿ ಅನ್ನ ತಿನ್ನುವ ಪ್ರತಿಯೊಬ್ಬನು ಕೊಡಬೇಕು. ಇಂದು ದೇಶದಲ್ಲಿ ಹಿಂದುತ್ವದ ಬಗ್ಗೆ ಚರ್ಚೆಯಾಗುತ್ತಿದೆ. ಒಂದು ಕಾಲದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುತ್ತೀರಾ ಅಂತ ನಗುತ್ತಿದ್ದರು. ಈಗ ರಾಮ ಮಂದಿರ ಕಟ್ಟಿದ್ದೇವೆ. ಹಾಗೆ ದೇಶದಲ್ಲಿ ಐನೂರು ವರ್ಷಗಳ ನಂತರವಾದರೂ ಭಗವಾ ಧ್ವಜವೇ ರಾಷ್ಟ್ರ ಧ್ವಜವಾಗಬಹುದು. ದೇಶದಲ್ಲಿ ಮೊದಲೇನು ತ್ರಿವರ್ಣ ಧ್ವಜ ಇತ್ತ ಹೇಳಿ? ಹಾಗಾಗಿ ಇವತ್ತಲ್ಲ ನಾಳೆ ಕೆಂಪುಕೋಟೆ ಮೇಲೆ ಕೇಸರಿ ಬಾವುಟ ಹಾರಲಿದೆ. ದೇಶದಲ್ಲಿ ಹಿಂದೂ ಧರ್ಮ ಬರಲಿದೆ’ ಎಂದಿದ್ದರು.  ಈ ಹೇಳಿಕೆ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ ಸಂದರ್ಶನದಲ್ಲಿ ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ.