Jun 18, 2020, 5:10 PM IST
ಬೆಂಗಳೂರು(ಜೂ.18): ರಾಜ್ಯಾದ್ಯಂತ ಅಚ್ಚುಕಟ್ಟಾಗಿ ಪಿಯುಸಿ ಪರೀಕ್ಷೆ ಮುಗಿದಿದೆ. ಎಂಟರಿಂದ ಹತ್ತು ಕಾಲೇಜಿನಲ್ಲಿ ಸ್ವಲ್ಪ ಅವ್ಯವಸ್ಥೆಯಾಗಿದ್ದು ನಿಜ, ಉಳಿದಂತೆ ಎಲ್ಲಾ ಸುಸೂತ್ರವಾಗಿ ನಡೆದಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ರಾಜ್ಯದಲ್ಲಿ ಒಂದುಸಾವಿರದ ಹದಿನಾರು ಪರೀಕ್ಷಾ ಕೇಂದ್ರಗಳಿವೆ. ಈ ಪೈಕಿ ಬಹುತೇಕ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ತುಂಬಾ ಅಚ್ಚುಕಟ್ಟಾಗಿ ನಡೆದಿದೆ. ಪೋಷಕರು ಈ ರೀತಿಯ ಪರೀಕ್ಷೆ ಆಯೋಜನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
PU ಪರೀಕ್ಷೆ ನಡೆಸುವಲ್ಲಿ ಸರ್ಕಾರ ಪಾಸ್, ಆದ್ರೆ ಸಾಮಾಜಿಕ ಅಂತರ ಕಾಪಾಡುವಲ್ಲಿ ಫೇಲ್..!
6 ಲಕ್ಷ ಮಕ್ಕಳು ಪಿಯುಸಿ ಪರೀಕ್ಷೆ ಬರೆದಿದ್ದಾರೆ. ಎಂಟುವರೆ ಲಕ್ಷ ವಿದ್ಯಾರ್ಥಿಗಳು SSLC ಪರೀಕ್ಷೆ ಬರೆಯಲಿದ್ದಾರೆ. SSLC ಪರೀಕ್ಷೆಗಾಗಿ ಮೂರು ಸಾವಿರ ಪರೀಕ್ಷಾ ಕೇಂದ್ರಗಳಿವೆ. ಹಾಗಾಗಿ ವಿದ್ಯಾರ್ಥಿಗಳು ಮತ್ತಷ್ಟು ಹಂಚಿಹೋಗಲಿದ್ದಾರೆ. ಹೀಗಾಗಿ ಜೂನ್ 25ರಿಂದ ಆರಂಭವಾಗಲಿರುವ ಹತ್ತನೇ ತರಗತಿ ಪರೀಕ್ಷೆ ಇನ್ನಷ್ಟು ಎಚ್ಚರಿಕೆಯಿಂದ ನಡೆಸಲಿದ್ದೇವೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.