ಚಾಮರಾಜ ಪೇಟೆ ಈದ್ಗಾ ಮೈದಾನ ವಿವಾದಕ್ಕೆ 14 ವರ್ಷದ ಇತಿಹಾಸವಿದೆ. 2006 ರಲ್ಲಿ ಅಂದಿನ ಡಿಸಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಸಂಧಾನ ಸಭೆ ನಡೆದಿತ್ತು. ಪ್ರಮೀಳಾ ನೇಸರ್ಗಿ, ಜಮೀರ್ ಅಹ್ಮದ್, ಆರ್ ವಿ ದೇವರಾಜ್, ಇಬ್ಬರು ಮಾಜಿ ಕಾರ್ಪೋರೇಟರ್, ಮುಸ್ಲಿಂ ಮುಖಂಡರ ಜೊತೆ ಸಂಧಾನ ಸಭೆ ನಡೆದಿತ್ತು.
ಬೆಂಗಳೂರು (ಜೂ. 11): ಚಾಮರಾಜ ಪೇಟೆ ಈದ್ಗಾ ಮೈದಾನ (Edga Maidana Row) ವಿವಾದಕ್ಕೆ 14 ವರ್ಷದ ಇತಿಹಾಸವಿದೆ. 2006 ರಲ್ಲಿ ಅಂದಿನ ಡಿಸಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಸಂಧಾನ ಸಭೆ ನಡೆದಿತ್ತು. ಪ್ರಮೀಳಾ ನೇಸರ್ಗಿ, ಜಮೀರ್ ಅಹ್ಮದ್, ಆರ್ ವಿ ದೇವರಾಜ್, ಇಬ್ಬರು ಮಾಜಿ ಕಾರ್ಪೋರೇಟರ್, ಮುಸ್ಲಿಂ ಮುಖಂಡರ ಜೊತೆ ಸಂಧಾನ ಸಭೆ ನಡೆದಿತ್ತು.
'ನಾನು ಶಾಸಕಿಯಾಗಿದ್ದಾಗ ಹಿಂದೂ ಮುಸ್ಲಿಂ ಕಾರ್ಯಕ್ರಮಗಳು ನಡೆಯುತ್ತಿತ್ತು, ಕಿಡಿಗೇಡಿಗಳಿಗೆ ಹೆದರಿ ಅಧಿಕಾರಿಗಳು ಈಗ ಅವಕಾಶ ಕೊಡುತ್ತಿಲ್ಲ, ಜಮೀರ್ ಶಾಸಕರಾದ ಬಳಿಕ ತಕರಾರು ಶುರುವಾಯ್ತು. ಜಮೀರ್ ಮುಸ್ಲಿಂಯೇತರ ಕಾರ್ಯಕ್ರಮಗಳಿಗೆ ಅಡ್ಡಿಪಡಿಸ್ತಾರೆ' ಎಂದು ಮಾಜಿ ಶಾಸಕಿ ಪ್ರಮೀಳಾ ನೇಸರ್ಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.