ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಗಡಗಡ ನಡುಗಿಸಿದ ಮುಡಾ!

Dec 4, 2024, 11:45 PM IST

ಮುಡಾದಲ್ಲಿ ಅಕ್ರಮವಾಗಿ ಸೈಟ್ ಮಾರಾಟ ಮಾಡಲಾಗಿದೆ. ಬೇನಾಮಿ, ನಕಲಿ ವ್ಯಕ್ತಿಗಳ ಹೆಸರಿನಲ್ಲಿ ಸೈಟ್ ಹಂಚಿಕೆ ಮಾಡಲಾಗಿದೆ ಅನ್ನೋ ಜಾರಿ ನಿರ್ದೇಶನಾಲಯದ 12 ಪುಟಗಳ ವರದಿ ಭಾರಿ ಸಂಚಲನ ಸೃಷ್ಟಿಸಿದೆ.  ಬರೋಬ್ಬರಿ 700 ಕೋಟಿ ರೂಪಾಯಿ ಮೊತ್ತದ ಸೈಟ್ ಹಗರಣ ಪತ್ತೆಯಾಗಿದೆ ಎಂದು ಇಡಿ ವರದಿ ಮಾಡಿದೆ.100ಕ್ಕೂ ಹೆಚ್ಚು ನಿವೇಷನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರುವುದು ಇಡಿ ತನಿಖೆಯಲ್ಲಿ ಪತ್ತೆಯಾಗಿದೆ. ಇತ್ತ ಕಾಂಗ್ರೆಸ್ ನಾಯಕರು ಇಡಿ ಕೇಂದ್ರದ ಕೈಗೊಂಬೆ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಇದೀಗ ಮುಡಾ ಮತ್ತೆ ಅಬ್ಬರಿಸಲು ಆರಂಭಿಸಿದೆ.