ಒಂದು ಕೈಯಲ್ಲಿ ಮೊಬೈಲ್, ಇನ್ನೊಂದು ಕೈಯಲ್ಲಿ ಸ್ಟೇರಿಂಗ್, ಚಾಲಕನ ಬೇಜವಾಬ್ದಾರಿತನವೇ ಈ ದುರಂತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ಅಪಘಾತಕ್ಕೂ ಮೊದಲು ನಿಲ್ದಾಣವೊಂದರಲ್ಲಿ ಕೆಲವರು ಚಾಲಕನಿಗೆ ಮಿತಿಮೀರಿದ ವೇಗದಲ್ಲಿ ಬಸ್ ಓಡಿಸದಂತೆ ಮನವಿಯನ್ನೂ ಮಾಡಿಕೊಂಡಿದ್ದರು ಎನ್ನಲಾಗಿದೆ.
ತುಮಕೂರು (ಮಾ, 20): ಒಂದು ಕೈಯಲ್ಲಿ ಮೊಬೈಲ್, ಇನ್ನೊಂದು ಕೈಯಲ್ಲಿ ಸ್ಟೇರಿಂಗ್, ಚಾಲಕನ ಬೇಜವಾಬ್ದಾರಿತನವೇ ಈ ದುರಂತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ಅಪಘಾತಕ್ಕೂ ಮೊದಲು ನಿಲ್ದಾಣವೊಂದರಲ್ಲಿ ಕೆಲವರು ಚಾಲಕನಿಗೆ ಮಿತಿಮೀರಿದ ವೇಗದಲ್ಲಿ ಬಸ್ ಓಡಿಸದಂತೆ ಮನವಿಯನ್ನೂ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೂ ಇದನ್ನು ಕಿವಿಗೆ ಹಾಕಿಕೊಳ್ಳದ ಚಾಲಕ ತಿರುವಿನಲ್ಲೂ ವೇಗವಾಗಿ ಬಸ್ ಓಡಿಸಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಬಸ್ನಲ್ಲಿದ್ದ ಪ್ರಯಾಣಿಕರೇ ಆರೋಪಿಸಿದ್ದಾರೆ.
ಈ ಅಪಘಾತದಲ್ಲಿ ಐವರು ವಿದ್ಯಾರ್ಥಿಗಳು ಸೇರಿ ಆರು ಮಂದಿ ಮೃತಪಟ್ಟಿದ್ದಾರೆ. 25ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಜಿಲ್ಲೆಯ ಸೂಲನಾಯಕನಹಳ್ಳಿಯ ಅಮೂಲ್ಯ(16), ಅಜಿತ್ (18), ಬೆಸ್ತರಹಳ್ಳಿಯ ಶಹನವಾಜ್ (18), ವೈ.ಎನ್.ಹೊಸಕೋಟೆಯ ಕಲ್ಯಾಣ್(18), ದಾದುವಲ್ಲಿ(26), ಹೃಷಿಕಾ(21) ಮೃತರು. ಘಟನೆಗೆ ಸಂಬಂಧಿಸಿ ಪಾವಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.