ಡಾ. ಸುಧಾಕರ್ ಬಿಚ್ಚಿಟ್ಟ 'ಆಗಸ್ಟ್ ಸ್ಫೋಟ'ದ ರಹಸ್ಯ

Jun 14, 2020, 2:47 PM IST

ಬೆಂಗಳೂರು (ಜೂ. 14): ಒಂದೆಡೆ ಕೊರೊನಾ ನಿಗ್ರಹಕ್ಕೆ ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ ಇನ್ನೊಂದೆಡೆ ಕೋವಿಡ್ 19 ಸೋಂಕು ಏರಿಕೆಯಾಗುತ್ತಿದೆ. ಆಗಸ್ಟ್ ವೇಳೆಗೆ ಸೋಂಕು ಗರಿಷ್ಠ ಮಟ್ಟ ತಲುಪುತ್ತಂತೆ! ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಈ ಸ್ಫೋಟಕ ಸತ್ಯವನ್ನು ಹೊರ ಹಾಕಿದ್ದಾರೆ.  

ಬೆಂಗಳೂರಲ್ಲಿ ಕಿಲ್ಲರ್‌ ಕೊರೋನಾ ಅಟ್ಟಹಾಸ: ಇಂದು ಮತ್ತೆ ಮೂವರು ಬಲಿ

ಆರೋಗ್ಯ ಇಲಾಖೆ ಇದಕ್ಕೆ ತಕ್ಕ ಸಿದ್ಧತೆ ಮಾಡಿಕೊಂಡಿಲ್ಲ. ರಾಜ್ಯದಲ್ಲಿ ವೆಂಟಿಲೇಟರ್‌ನ ತೀವ್ರ ಕೊರತೆ ಇದೆ. 1500 ವೆಂಟಿಲೇಟರ್‌ಗಳಲ್ಲಿ ಸೇವೆಗೆ ಲಭ್ಯವಿರೋದು 63 ಮಾತ್ರ. 84, 776 ಹಾಸಿಗೆಗಳ ಪೈಕಿ ಕೊರೊನಾಗೆ ಲಭ್ಯವಿರೋದು 21728 ಹಾಸಿಗೆ ಮಾತ್ರ. ಹಾಗಾಗಿ ಕೋವಿಡ್ 19 ಗರಿಷ್ಠ ಮಟ್ಟಕ್ಕೆ ತಲುಪಿದರೆ ಚಿಕಿತ್ಸೆ ಕೊಡುವುದು ಬಹಳ ಕಷ್ಟ ಎಂದಿದ್ದಾರೆ.