Aug 23, 2020, 12:27 PM IST
ಬೆಂಗಳೂರು (ಆ. 23): ನಂಜನಗೂಡು THO ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ IAS ಅಧಿಕಾರಿ ಮಿಶ್ರಾ ಬೆಂಬಲಕ್ಕೆ ಪಿಡಿಒಗಳು ನಿಂತಿದ್ದಾರೆ. 'ದಕ್ಷ ಅಧಿಕಾರಿ ಮಿಶ್ರಾರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಈ ರೀತಿ ತೇಜೊವಧೆ ಸರಿಯಲ್ಲ. ವರ್ಗಾವಣೆ ಮಾಡಬಾರದು. ತನಿಖೆ ಮುಗಿಯುವವರೆಗೆ ವರ್ಗಾವಣೆ ತಡೆ ಹಿಡಿಯಲಿ' ಎಂದು ಪಿಡಿಒಗಳು ಒತ್ತಾಯಿಸಿದ್ದಾರೆ.
ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಸುವರ್ಣ ನ್ಯೂಸ್ ಜೊತೆ ಮಾತನಾಡುತ್ತಾ, 'ಡಾ. ರವೀಂದ್ರ ಅವರ ಬೇಡಿಕೆ ಸಮಂಜಸವಲ್ಲ. ತನಿಖೆ ಮುಗಿಯದೆಯೇ ಯಾರೊಬ್ಬರ ಮೇಲೆಯೂ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಕಾನೂನಿನಲ್ಲಿ ಅದಕ್ಕೆ ಅವಕಾಶವೂ ಇಲ್ಲ. ಮೊದಲು ತನಿಖೆ ಮುಗಿಯಲಿ. ಆನಂತರ ಕ್ರಮ ಕೈಗೊಳ್ಳುತ್ತೇವೆ' ಎಂದು ಹೇಳಿದ್ಧಾರೆ.
ಮೈಸೂರಿನಲ್ಲಿ ಹೆಚ್ಚಾದ ಪ್ರತಿಭಟನೆ ಕಾವು; 2 ದಿನದಿಂದ ಕೋವಿಡ್ ವರದಿಯನ್ನೇ ಸಲ್ಲಿಸಿಲ್ಲ ಆರೋಗ್ಯ ಇಲಾಖೆ