DK Suresh Vs Ashwath Narayan : ಉಭಯ ನಾಯಕರಿಗಾದ ರಾಜಕೀಯ ಲಾಭವೇನು..?

Jan 5, 2022, 4:42 PM IST

ಬೆಂಗಳೂರು (ಜ. 05): ಸ​ವ​ರಾಜ ಬೊಮ್ಮಾಯಿ (Basavaraj bommai) ಎದು​ರ​ಲ್ಲಿಯೇ ಉನ್ನತ ಶಿಕ್ಷಣ ಸಚಿವ ಡಾ.ಸಿ.​ಎನ್‌. ಅ​ಶ್ವತ್ಥ ನಾರಾ​ಯಣ (Ashwath Narayan) ಹಾಗೂ ಸಂಸದ ಡಿ.ಕೆ.​ಸು​ರೇಶ್‌ (DK Suresh) ರವರು ಪರಸ್ಪರ ಸವಾಲು ಹಾಕಿ​ಕೊಂಡು ಕೈ ಕೈ ಮಿಲಾ​ಯಿಸಿರುವ ಪ್ರಸಂಗ, ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಹುಟ್ಟು ಹಾಕಿದೆ. 

DK Suresh Vs Ashwath Narayan: ಸಿಎಂ ಮುಂದೆ ಸಂಸದ -ಸಚಿವರ ಫೈಟ್, ಹಿಂದಿನ ರಾಜಕೀಯ ಲೆಕ್ಕಾಚಾರವೇನು..?

‘ಮಾಗಡಿ ಅಂದರೆ ಗೊತ್ತಲ್ಲ. ಅದು ಕೆಂಪೇಗೌಡರ ನೆಲ. ಅಲ್ಲಿನ ಚಿಕ್ಕಕಲ್ಯ ಗ್ರಾಮದಲ್ಲೇ ನನ್ನ ಕಂದಾಯ (ಆರ್‌.ಟಿ.ಸಿ) ದಾಖಲೆಗಳಿವೆ. ಚಿಕ್ಕಕಲ್ಯ ನಾರಾಯಣಪ್ಪ ಅಶ್ವತ್ಥನಾರಾಯಣ ಎನ್ನುವ ನನ್ನ ಪೂರ್ಣ ಹೆಸರನ್ನು ನೆನಪಿಸಬೇಕಾಗಿದೆ. ಮಿಸ್ಟರ್‌ ಡಿ.ಕೆ.ಶಿವಕುಮಾರ್‌, ಗೂಂಡಾಗಿರಿ ಬಿಡಿ. ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರಬೇಡಿ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರೆ, 'ಗಂಡಸ್ತನ’ ಕುರಿತು ಚರ್ಚೆಗೆ ಪ್ರತ್ಯೇಕ ಸಮಯ, ಸ್ಥಳ ನಿಗದಿ ಮಾಡುವಂತೆ ಸಚಿವ ಅಶ್ವತ್ಥನಾರಾಯಣ ಅವರಿಗೆ ಹೇಳಿದ್ದೆ. ಈ ಹೇಳಿಕೆಗೆ ನಾನು ಈಗಲೂ ಬದ್ಧ. ನಾನು ಪಲಾಯನ ಮಾಡುವವನಲ್ಲ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದ್ದಾರೆ. ಈ ಗಲಾಟೆಯಿಂದ ಲಾಭವಾಗಿದ್ದು ಸಚಿವ ಅಶ್ವತ್ಥ್ ನಾರಾಯಣ್‌ಗಾ.? ಸಂಸದ ಡಿಕೆ ಶಿವಕುಮಾರ್‌ಗಾ..? ಇಲ್ಲಿದೆ ಇನ್‌ಸೈಡ್ ರಿಪೋರ್ಟ್