NEP ಅಂದ್ರೆ ನಾಗಪುರ್ ಎಜುಕೇಷನ್ ಪಾಲಿಸಿ, ಅರ್ಥವೇ ಅಗಲ್ಲ ಬಿಡಿ.! ಡಿಕೆಶಿ

Sep 4, 2021, 5:39 PM IST

ಬೆಂಗಳೂರು (ಸೆ. 04): ಹೊಸ ಶಿಕ್ಷಣ ನೀತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. 

'ತಜ್ಞರು, ವಿದ್ಯಾರ್ಥಿಗಳು, ನಾಯಕರ ಅಭಿಪ್ರಾಯವನ್ನು ಕೇಳದೇ ಜಾರಿಗೊಳಿಸಲು ಮುಂದಾಗಿದ್ದೀರಿ. ಎರಡ್ಮೂರು ಸಲ ಓದಿದರೂ ನೂತನ ಶಿಕ್ಷಣ ನೀತಿ ಅರ್ಥವಾಗುತ್ತಿಲ್ಲ. ಮಾತೃಭಾಷೆ ಬಿಟ್ಟು ಹಿಂಬಾಗಿಲಿನಿಂದ ಹಿಂದಿ ತರುವ ಯತ್ನ ನಡೆಯುತ್ತಿದೆ. ಈ ಬಗ್ಗೆ ಚರ್ಚೆ ಆಗುವವರೆಗೂ ಶಿಕ್ಷಣ ನೀತಿ ತಡೆ ಹಿಡಿಯಬೇಕು. ಸರ್ಕಾರ ಯಾಕಿಷ್ಟು ತರಾತುರಿ ಮಾಡುತ್ತಿದೆ ಅರ್ಥವಾಗುತ್ತಿಲ್ಲ' ಎಂದಿದ್ಧಾರೆ.