ಕೋವಿಡ್ ಸಂಕಷ್ಟ, ಗ್ಯಾಸ್ ಬೆಲೆ ಏರಿಕೆ ನ್ಯಾಯಾನಾ.? ಜನರಿಂದ ಉತ್ತರದ ನಿರೀಕ್ಷೆಯಲ್ಲಿ ಡಿಕೆಶಿ

Sep 11, 2021, 5:16 PM IST

ಬೆಂಗಳೂರು (ಸೆ. 11): ಗ್ಯಾಸ್ ಬೆಲೆ ಏರಿಕೆ ವಿರುದ್ಧ ಡಿಕೆಶಿ ಸೋಷಿಯನ್ ಮೀಡಿಯಾ ಮೂಲಕ ಜನಜಾಗೃತಿಗೆ ಪ್ಲ್ಯಾನ್ ಮಾಡಿದ್ದಾರೆ. ಗ್ಯಾಸ್ ಬೆಲೆ ಇಳಿಕೆಯಾಗಬೇಕೆಂದು ಬಡ, ಮಧ್ಯಮ ವರ್ಗದವರ ಪರ ಧ್ವನಿ ಎತ್ತಿದ್ದಾರೆ. 

ಎಲ್‌ಪಿಜಿ ಸಿಲಿಂಡರ್ ಬೆಲೆ 900 ರ ಗಡಿ ದಾಟಿದೆ. ಜನ ಕೋವಿಡ್ ಸಂಕಷ್ಟದಿಂದ ಬೇಸತ್ತು ಹೋಗಿದ್ದಾರೆ. ರಾಜ್ಯದ ಬೇರೆ ಬೇರೆ ಸುತ್ತಾಡಿ ಜನರನ್ನು ಮಾತನಾಡಿಸಿದ್ದೇನೆ. ಅವರೆಲ್ಲರ ಬೆಲೆ ಏರಿಕೆಯಿಂದ ಬೆಂದು ಹೋಗಿದ್ದಾರೆ. ಅವರ ಮುಂದಿರುವ ಆಯ್ಕೆ ಎರಡು. ಸಿಲಿಂಡರ್ ತಂದು ಅಡುಗೆ ಮಾಡಬೇಕಾ..? ಮಕ್ಕಳ ಶಾಲಾ ಫೀಸ್ ಕಟ್ಟಬೇಕಾ..? ಎಂದು ಪ್ರಶ್ನಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಸಿಲಿಂಡರ್ ಬೆಲೆ ಏರಿಕೆ ನ್ಯಾಯಾನಾ..? ನಿಮ್ಮ ಉತ್ತರವನ್ನು ಟ್ವಿಟರ್, ಫೇಸ್‌ಬುಕ್, ಇನ್ಸ್ಟಾಗ್ರಾಮ್‌ನಲ್ಲಿ ತಿಳಿಸಿ ಎಂದು ಡಿಕೆಶಿ ಮನವಿ ಮಾಡಿದ್ದಾರೆ.