ಪಕ್ಷ ಬಲಪಡಿಸಲು ಬಿಜೆಪಿ ಪ್ಲ್ಯಾನ್, ಡಿಕೆಶಿ ಹೈಜಾಕ್.!

Oct 9, 2021, 2:53 PM IST

ಬೆಂಗಳೂರು (ಅ. 09): ಬಿಜೆಪಿಯ ಪ್ಲಸ್ ಪಾಯಿಂಟ್ ಅಂದರೆ ಕಾರ್ಯಕರ್ತರು. ಚುನಾವಣೆ ಇರಲಿ, ಬಿಡಲಿ ಕೆಲಸ ಮಾಡುತ್ತಾರೆ. ಅದೇ ಸ್ಟ್ರಾಟಜಿಯನ್ನು ಕಾಂಗ್ರೆಸ್‌ನಲ್ಲಿ ತರಲು ಡಿಕೆಶಿ ಪ್ಲ್ಯಾನ್ ಮಾಡುತ್ತಿದ್ದಾರೆ. ಅದಕ್ಕೊಂದಿಷ್ಟು ಬ್ಲೂ ಪ್ರಿಂಟ್ ಸಿದ್ಧವಾಗಿದೆ.

ಬೊಮ್ಮಾಯಿ- ನಡ್ಡಾ ಭೇಟಿ: ಸಂಪುಟ ವಿಸ್ತರಣೆ ಸುಳಿವು..?

ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು ಎಂದು ತಿಳಿಸುವುದು, ತಳಮಟ್ಟದಲ್ಲಿ ಕೇಡರ್ ಕಾರ್ಯಕರ್ತರ ಪಡೆ ಬಲಪಡಿಸಿ ಪಕ್ಷ ಕಟ್ಟಲು ಪ್ಲ್ಯಾನ್, ಮೊದಲು ಕಾರ್ಯಕರ್ತ, ನಂತರ ನಾಯಕ ಎನ್ನುವ ಸಿದ್ಧಾಂತದಡಿಯಲ್ಲಿ ಕೇಡರ್ ಸಿದ್ಧಪಡಿಸುತ್ತಿದ್ದಾರೆ. ಕೇಡರ್ ಕಾರ್ಯಕರ್ತರನ್ನು ತಯಾರು ಮಾಡಲು ತಂಡವನ್ನು ಕಟ್ಟಲಾಗಿದೆ. ಇದರ ಹೊಣೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಗೆ ನೀಡಲಾಗಿದೆ.