May 12, 2022, 4:17 PM IST
ಬೆಂಗಳೂರು (ಮೇ. 12): ರಮ್ಯಾ (Ramya) ಏನ್ ಟ್ವೀಟ್ ಮಾಡಿದ್ದಾರೋ, ಏನ್ ಮಿಸ್ ಫೈಯರ್ ಆಗಿದೆಯೋ ಗೊತ್ತಿಲ್ಲ. ರಮ್ಯಾ, ಎಂಬಿ ಪಾಟೀಲ್ (MB ptil) ಇಬ್ಬರೂ ನನಗೆ ಬೇಕಾದವರು, ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ. ಅಶ್ವತ್ಥ್ ನಾರಾಯಣ್-ಎಂಬಿಪಾ ಭೇಟಿ ಬಗ್ಗೆ ಮಾಧ್ಯಮಗಳು ನನ್ನನ್ನು ಪ್ರಶ್ನಿಸಿದರು, ಇರಬಹುದು ಅಂದಿದ್ದೇ ಅಷ್ಟೇ. ಅದನ್ನ ಯಾಕೆ ರಾಮಾಯಣ ಮಾಡಿದರೋ ಗೊತ್ತಿಲ್ಲ' ಎಂದು ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.
ಅನ್ಯ ಪಕ್ಷದ ನಾಯಕರು ಪರಸ್ಪರ ಭೇಟಿಯಾಗುವುದು ಸಾಮಾನ್ಯ. ಆದರೆ, ಪಕ್ಷದ ನಿಷ್ಠಾವಂತರಾದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಅವರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆ ಆಶ್ಚರ್ಯ ತಂದಿದೆ ಎಂದು ಮಾಜಿ ಸಂಸದೆ ರಮ್ಯಾ ಅವರು ಅಸಮಾಧಾನ ಹೊರ ಹಾಕಿದ್ದಾರೆ.