ಯಾವುದೂ ಶಾಶ್ವತವಲ್ಲ. ಸೋಲು- ಗೆಲುವು ಶಾಶ್ವತವಲ್ಲ. ಹಲವು ಬಾರಿ ನಾನೂ ಸೋತಿದ್ದೇನೆ, ಗೆದ್ದಿದ್ದೇನೆ. ಹಾಸನದಲ್ಲಿ ಇಂದು ಗೆದ್ದಿರುವವರು ನಾಳೆ ಸೋಲುವ ದಿನ ದೂರವಿಲ್ಲ, ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಹೇಳಿಕೆ ರಾಜಕೀಯ ಸಂಚಲನ ಮೂಡಿಸಿದೆ.
ಬೆಂಗಳೂರು (ಡಿ. 27): ರಾಜಕಾರಣದಲ್ಲಿ (Politics) ಯಾವುದೂ ಶಾಶ್ವತವಲ್ಲ. ಸೋಲು- ಗೆಲುವು ಶಾಶ್ವತವಲ್ಲ. ಹಲವು ಬಾರಿ ನಾನೂ ಸೋತಿದ್ದೇನೆ, ಗೆದ್ದಿದ್ದೇನೆ. ಹಾಸನದಲ್ಲಿ ಇಂದು ಗೆದ್ದಿರುವವರು ನಾಳೆ ಸೋಲುವ ದಿನ ದೂರವಿಲ್ಲ. ದೇವೇಗೌಡರು ತೇಜಸ್ವಿನಿ ವಿರುದ್ಧ ಸೋತಿದ್ದರು, ನಾನು ದೇವೇಗೌಡರ (HD Devegowda) ವಿರುದ್ಧ ಸೋತಿದ್ದೇನೆ. ದೇವೇಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ (HD Kumaraswamy) ವಿರುದ್ಧ ನಾನು ಗೆದ್ದಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಹೇಳಿಕೆ ರಾಜಕೀಯ ಸಂಚಲನ ಮೂಡಿಸಿದೆ.
ಜೆಡಿಎಸ್ ಇಡೀ ರಾಜ್ಯದಲ್ಲಿ ನೆಲೆ ಕಳೆದುಕೊಳ್ಳುತ್ತಿದ್ದು, ಮಂಡ್ಯ, ಮೈಸೂರು ಸೇರಿ ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ನ ಏಳು ಶಾಸಕರಿದ್ದರೂ ನಮ್ಮ ಅಭ್ಯರ್ಥಿ, ಸಾಮಾನ್ಯ ಕಾರ್ಯಕರ್ತ ಗೂಳಿಗೌಡ ಗೂಳಿಯಂತೆ ಜಿಲ್ಲಾದ್ಯಂತ ಸಂಚಾರ ಮಾಡಿ ಜಯಗಳಿಸಿದ್ದಾರೆ ಎಂದರು. ಇನ್ನು ಜೆಡಿಎಸ್‌ನಲ್ಲಿ 80 ಶಾಸಕರಿದ್ದರು. ಅದರಲ್ಲಿ 13 ಮಂದಿ ಬೇರೆ ಪಕ್ಷಕ್ಕೆ ಹೋಗಿದ್ದರು. ಈಗ ಕಾಂಗ್ರೆಸ್ ಬಿಟ್ಟು ಹೋಗಿರುವವರೂ ಮತ್ತೆ ಪಕ್ಷ ಸೇರ್ಪಡೆಯಾಗಲು ಸಾಲಿನಲ್ಲಿ ನಿಂತಿದ್ದಾರೆ ಎಂದು ಇದೇ ವೇಳೆ ಡಿಕೆಶಿ ಹೇಳಿದ್ದಾರೆ.