
ಗಿರೀಶ್ ಮಟ್ಟೆಣ್ಣನವರ ಮೇಲೆ ಈಗಾಗಲೇ ಸಾಕಷ್ಟು ಕೇಸ್ಗಳಿವೆ. ಈಗ ಹೊಸದೊಂದು ಕೇಸ್ ಆತನ ಮೇಲೆ ಬಿದ್ದಿದೆ. ಇನ್ನೂ ನಮ್ಮ ಮ್ಯಾಜಿಕ್ ಅಜ್ಜಿಯ ಹೊಸ ಪುರಾಣವನ್ನ ಹೇಳಲು ಆಕೆಯ ಸಹೋದರನೇ ಮುಂದೆ ಬಂದಿದ್ದಾರೆ.
ಧರ್ಮಸ್ಥಳ ವಿರೋದಿ ಗ್ಯಾಂಗ್ನ ಒಂದು ವಿಕೆಟ್ ಪತನವಾಗಿದೆ. ತನ್ನ ಬಾಯಿಯನ್ನ ಹರಿಬಿಟ್ಟು ಮಹೇಶ್ ತಿಮರೋಡಿ ಪೊಲೀಸರ ಅತಿಥಿಯಾಗಿದ್ದಾನೆ. ಇನ್ನೂ ಆತನ ಶಿಷ್ಯ ಸಮೀರ್ ಜಾಮೀನು ಪಡೆದು ಜಸ್ಟ್ ಮಿಸ್ ಆಗಿದ್ದಾನೆ. ಉಳಿದ ಗಿರೀಶ್ ಮಟ್ಟೆಣ್ಣನವರ ಮೇಲೆ ಈಗಾಗಲೇ ಸಾಕಷ್ಟು ಕೇಸ್ಗಳಿವೆ. ಈಗ ಹೊಸದೊಂದು ಕೇಸ್ ಆತನ ಮೇಲೆ ಬಿದ್ದಿದೆ. ಇನ್ನೂ ನಮ್ಮ ಮ್ಯಾಜಿಕ್ ಅಜ್ಜಿಯ ಹೊಸ ಪುರಾಣವನ್ನ ಹೇಳಲು ಆಕೆಯ ಸಹೋದರನೇ ಮುಂದೆ ಬಂದಿದ್ದಾರೆ. ಹಾಗಾದ್ರೆ ಆ ಸಹೋದರ ಹೇಳಿದ್ದೇನು..? ಧರ್ಮಸ್ಥಳ ವಿರೋಧಿ ಗ್ಯಾಂಗ್ನ ಲೇಟೆಸ್ಟ್ ಅಪ್ಡೇಟ್ಸ್ ಏನು ಅನ್ನೋದನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್.ಐ.ಆರ್. ಸಂಶಯ, ಗುಮಾನಿಗಳಿಂದಲೇ ಆವರಿಸಿಕೊಂಡಿದ್ದ ಧರ್ಮಸ್ಥಳ ಫೈಲ್ಸ್ನಲ್ಲಿ ಈಗ ನಿಧಾನಕ್ಕೆ ಸ್ಪಷ್ಟತೆ ಮೂಡುತ್ತಿದೆ. ಒಂದು ಗ್ಯಾಂಗ್ ಧರ್ಮಸ್ಥಳದ ಅವಹೇಳನಕ್ಕಾಗಿ ಸಂಚು ರೂಪಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಎಸ್ಐಟಿ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದು, ತಾವೇ ರಚಿಸಿದ್ದ ಷಡ್ಯಂತ್ರ ಈಗ ಸಂಚುಕೋರರಿಗೆ ತಿರುಗುಬಾಣವಾಗಿರೋದ್ರಲ್ಲಿ ಡೌಟೇ ಇಲ್ಲ. ಇನ್ನೂ ಇದೇ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಒಂದು ಕಡೆ ಧರ್ಮಸ್ಥಳದ ವಿರುದ್ಧ ಕೆಲವರು ಷಡ್ಯಂತರ ಮಾಡ್ತಿದ್ರೆ ಕೆಲವರು ಧರ್ಮಸ್ಥಳಕ್ಕೆ ಬೆಂಬಲ ಸೂಚಿಸಿ ರಾಜ್ಯಾವ್ಯಾಪಿ ಹೋರಾಟ ಮಾಡ್ತಿದ್ದಾರೆ. ಇನ್ನೂ ಈ ಕೇಸ್ನಲ್ಲಿ SIT ರಚನೆಯಾದಾಗಿನಿಂದ ರಾಜಕೀಯ ಕೆಸರೆರಚಾಟವೂ ಜೋರಾಗಿ ನಡೆಯುತ್ತಿದೆ. ಬಿಜೆಪಿ SIT ರಚಿಸಿದ್ದನ್ನೇ ಪ್ರಶ್ನಿಸಿದ್ರೆ ಸರ್ಕಾರ ಮಾತ್ರ ಸಮರ್ಥನೆ ಮಾಡಿಕೊಳ್ತಿದೆ. ದಿನ ಕಳೆದಂತೆ ಧರ್ಮಸ್ಥಳ ಪರ ನಡೆಯುತ್ತಿರೋ ಹೋರಾಟದ ಕಾವು ಹೆಚ್ಚುತ್ತಲೇ ಇದೆ. ಒಂದೆಡೆ ಬಿಜೆಪಿ ಧರ್ಮಯುದ್ಧ ಆರಂಭಿಸಿದ್ರೆ, ಮತ್ತೊಂದೆಡೆ ಸಂಘಟನೆಗಳು, ಭಕ್ತರು ಧರ್ಮಸ್ಥಳದ ಪರ ದನಿ ಎತ್ತಿದ್ದಾರೆ. ಈ ಬೆಳವಣಿಗೆ ಸರ್ಕಾರಕ್ಕೂ ಸವಾಲಾಗಿರೋದು ಸುಳ್ಳಲ್ಲ.