Karnataka Covid Crisis : ಲಾಕ್ ಡೌನ್ ಮಾಡುವ ಬದಲು ಸರ್ಕಾರ ಜನರಿಗೆ ವಿಷ ಕೊಟ್ಟು ಬಿಡಲಿ

Jan 6, 2022, 11:25 AM IST

ಬೆಂಗಳೂರು (ಜ.06):  'ಲಾಕ್ ಡೌನ್ (Lockdown) ಮಾಡುವ ಬದಲು ಸರ್ಕಾರ ಜನರಿಗೆ  ವಿಷ ಕೊಟ್ಟು ಕೊಂದು ಬಿಡಲಿ ಎಂದು ಸರ್ಕಾರದ ವೀಕೆಂಡ್ ಕರ್ಫ್ಯೂ, 50-50 ನಿಯಮದ ವಿರುದ್ಧ ಮಂಗಳೂರಿನಲ್ಲಿ (Mangaluru) ಆಕ್ರೋಶ ವ್ಯಕ್ತವಾಗಿದೆ. ನಮಗೆ ತಿನ್ನೋಕೆ ಗತಿ ಇಲ್ಲ, ನಾವೆಲ್ಲ ದುಡಿದು ತಿನ್ನೋರು. ಸಾಲಗಳು, ಬ್ಯಾಂಕ್ (Bank) ಕಿರಿಕಿರಿಯಿಂದ ಜನ ಒದ್ದಾಡುತ್ತಿದ್ದಾರೆ. ದುಡಿಯುವ ಜನ ಸಾಯುವ ಪರಿಸ್ಥಿತಿ ಇದೆ, ಸಾಲದ ಕಿರಿಕಿರಿ ಮತ್ತು ತಿನ್ನೋಕೆ ಇಲ್ಲದಂತ ಸ್ಥಿತಿ ಎದುರಾಗುತ್ತಿದೆ.  ಲಾಕ್ ಡೌನ್ (Lockdown) ಮಾಡುವ ಬದಲು ಸರ್ಕಾರ ಜನರಿಗೆ  ವಿಷ ಕೊಟ್ಟು ಬಿಡಲಿ ಎಂದು ಸಾಮಾಜಿಕ ಹೋರಾಟಗಾರ ದೀಪು ಶೆಟ್ಟಿಗಾರ್ ಆಕ್ರೋಶ ಹೊರಹಾಕಿದ್ದಾರೆ. 

Uttara Kannada: ಹೊರ ರಾಜ್ಯದಿಂದ ಬರುವವರಿಗೆ ನೆಗೆಟಿವ್‌ ವರದಿ ಕಡ್ಡಾಯ

ಇವರು ರೋಗವನ್ನು ರಾಜಕಾರಣಿಯ (Politician) ಕುಟುಂಬದ ದೆವ್ವದ ಹಾಗೆ ಮಾಡಿದ್ದಾರೆ.  ಇವರಿಗೆ ಇಷ್ಟ ಬಂದಾಗ ರೋಗ ಹೊರಗೆ ಬರೋದು ಆಗುತ್ತಿದೆ.  ಎಲೆಕ್ಷನ್ (Election) ಇರುವಾಗ ರೋಗ ಇಲ್ಲ, ಮುಗಿದ ಮೇಲೆ ಬರುತ್ತದೆ.   ಮನುಷ್ಯ ಟೆನ್ಶನ್ ನಿಂದ ಸಾಯುತ್ತಿದ್ದಾನೆ. ಕೊರೋನಾಗೆ (Corona) ಮದ್ದು ಇರಬಹುದು, ಟೆನ್ಶನ್ ಗೆ ಇಲ್ಲ.  ನೀವು ಕೋಟಿ ಗಟ್ಟಲೇ ಮಾಡಿಟ್ಟದ್ದು ಇದೆ, ನಮಗೆ ಕೆಲಸಕ್ಕೆ ಹೋದರೆ ಮಾತ್ರ ಮನೆ ನಡೆಯುತ್ತದೆ. ಇವರು ಹತ್ತು ವರ್ಷ ಬಂದ್ ಮಾಡಿದರು ಬದುಕುವಷ್ಟು ಮಾಡಿಟ್ಟಿದ್ದಾರೆ.  ರೋಗದ ಪ್ರಾಬಲ್ಯತೆಗಿಂತ ಇಲ್ಲಿ ದೊಡ್ಡ ಮಾಫಿಯಾ ಕೆಲಸ ಮಾಡುತ್ತಿದೆ.  ಈ ರೋಗ ಇರೋದು ಆಸ್ಪತ್ರೆಯಲ್ಲಿ ಮಾತ್ರ, ಆಸ್ಪತ್ರೆಗೆ ಹೋದವರಿಗೆಲ್ಲಾ ಕೊರೋನಾ. ಹೀಗಾಗಿ ಮೆಡಿಕಲ್ ಮಾಫಿಯಾ ಇದೆ, ಈ ಬಗ್ಗೆ ಸರ್ಕಾರ ಗಮನಿಸಲಿ ಎಂದು ಅಸಮಾಧಾನ ಹೊರಹಾಕಲಾಗಿದೆ.