Nov 12, 2021, 5:35 PM IST
ಬೆಂಗಳೂರು (ನ. 12): ಬಿಟ್‌ಕಾಯಿನ್ (Bitcoin) ಸೇರಿದಂತೆ ಕ್ರಿಪ್ಟೋ ಕರೆನ್ಸಿ ಹ್ಯಾಕ್ ಮಾಡುವಲ್ಲಿ ಪರಿಣತನಾಗಿರುವ ಶ್ರೀಕಿ, ಗಣ್ಯರ ಸಾಮಾಜಿಕ ಜಾಲತಾಣ ಹ್ಯಾಕ್ ಮಾಡಿರುವ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಹ್ಯಾಕ್ ಆಗಿರುವ ವ್ಯಕ್ತಿಗಳ ಹೆಸರನ್ನು ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾನೆ.
BitCoin Scam : ಪ್ರಿಯಾಂಕ ಖರ್ಗೆ ಸುದ್ದಿಗೋಷ್ಠಿ, ಇಡೀ ಕೇಸ್‌ನ ಡಿಟೇಲ್ ರಿವೀಲ್..!
ಇನ್ನು ಬಿಟ್‌ಕಾಯಿನ್ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ರಾಜಕೀಯ ನಾಯಕರು ಒಬ್ಬರಿಗೊಬ್ಬರು ವಾಕ್ಸಮರ ನಡೆಸುತ್ತಿದ್ದಾರೆ. 'ಸಿದ್ದರಾಮಯ್ಯನವರು ಮಹಾನ್ ಆರ್ಥಿಕತಜ್ಞರು. ಬಿಟ್ ಕಾಯಿನ್ ಎಂದರೇನು? ಅದು ಹೇಗೆ ವ್ಯವಹಾರ ಆಗುತ್ತೆ. ಅದನ್ನ ನಮ್ಮಂತವರಿಗೆ ವಿವರಿಸಲಿ, ಆ ಬಗ್ಗೆ ತಿಳಿದುಕೊಳ್ಳುವ ಕುತೂಹಲ' ನಮಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಬಿಟ್ ಕಾಯಿನ್ ಹ್ಯಾಕರ್ ಶ್ರೀಕಿಗೆ ಸಂಬಂಧಿಸಿದ ಹಳೆಯ ಮಾಹಿತಿಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರ ಘನತೆಗೆ ಧಕ್ಕೆ ತರುವ ಹುನ್ನಾರ ನಡೆಸಲಾಗುತ್ತಿದೆ. ಆದರೆ, ನಮ್ಮ ಬಳಿಯೂ ಕೆಲ ಮಾಹಿತಿಯಿದೆ. ಅದನ್ನು ಸೂಕ್ತ ಸಂದರ್ಭದಲ್ಲಿ ಬಹಿರಂಗಪಡಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.