ರೈತರೇ ಸಬ್ಸಿಡಿ ಸಾಲಕ್ಕೆ ಪಹಣಿ ಕೊಡುವ ಮುನ್ನ ಎಚ್ಚರ; ಹೀಗೂ ಮೋಸ ಮಾಡಬಹುದು ನೋಡಿ!

Nov 21, 2020, 12:26 PM IST

ಬೆಂಗಳೂರು (ನ. 21): ರೈತರೇ, ಸಾಲ ತೆಗೆದುಕೊಳ್ಳುವಾಗ ಬಹಳ ಎಚ್ಚರ ವಹಿಸಿ. ಇಲ್ಲದಿದ್ರೆ ಈ ರೀತಿ ಎಡವಟ್ಟಾದೀತು. ಸಬ್ಸಿಡಿ ಸಾಲ ಕೊಡಿಸುವುದಾಗಿ ರೈತರಿಂದ ದಾವಣಗೆರೆಯ ಸಿಜಿಆರ್ ಕಂಪನಿ ಪಹಣಿ ಪಡೆದಿದೆ. ರೈತರಿಗೆ ಗೊತ್ತಿಲ್ಲದೇ ಇವರ ಹೆಸರಲ್ಲಿ 40 ಲಕ್ಷ ಸಾಲ ಪಡೆದಿದೆ. ಆದರೆ ರೈತರಿಗೆ ಕೊಟ್ಟಿದ್ದ ಮಾತ್ರ 30-40 ಸಾವಿರ ರೂ. ಬ್ಯಾಂಕಿನಿಂದ ನೊಟೀಸ್ ಬಂದಾಗಲೇ ರೈತರಿಗೆ ವಿಚಾರ ತಿಳಿಸಿದೆ. 

ಪ್ರಾಣದ ಹಂಗು ತೊರೆದು ನಾಲ್ಕು ಮಂದಿ ರಕ್ಷಿಸಿದ ಗರ್ಭಿಣಿ ಶ್ವಾನ, ಆದರೆ ಆಗಿದ್ದು..

ಸಿಜಿಆರ್ ಕಂಪನಿ ರೈತರಿಗಷ್ಟೇ ಅಲ್ಲ, ಸಾಲ ಕೊಟ್ಟ ಕಂಪನಿಗೂ ಮೋಸ ಮಾಡಿದೆ. ರೈತರದ್ದು ಲಕ್ಷ ಲಕ್ಷ ಮೌಲ್ಯದ ಅಡಿಕೆ ಬೆಳೆ ಇದೆ ಎಂದು ದಾಖಲೆ ಸೃಷ್ಟಿ ಮಾಡಿದೆ. . 2 ಗೋದಾಮುಗಳನ್ನು ಬಾಡಿಗೆಗೆ ಪಡೆದು ಅದನ್ನು ಅಡಿಕೆ ಗೋದಾಮು ಎಂದು ನಂಬಿಸಿದೆ. ಖಾಲಿ ಡ್ರಮ್ ತೋರಿಸಿ 18 ಕೋಟಿ ರೂ ಸಾಲ ಪಡೆದಿದೆ. ಮೋಸ ಹೋದ ರೈತರು ದಾವಣಗೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.