ರಾಜ್ಯ ರಾಜಕೀಯದಲ್ಲಿ 'ತಾಲಿಬಾನ್' ವಾರ್ ಮುಂದುವರೆದಿದೆ. ಸಿದ್ದರಾಮಯ್ಯ ತಾಲಿಬಾನ್ ಹೇಳಿಕೆಗೆ ಸಿ ಟಿ ರವಿ ಟಾಂಗ್ ನೀಡಿದ್ಧಾರೆ.
ಬೆಂಗಳೂರು (ಸೆ. 29): ರಾಜ್ಯ ರಾಜಕೀಯದಲ್ಲಿ 'ತಾಲಿಬಾನ್' ವಾರ್ ಮುಂದುವರೆದಿದೆ. ಸಿದ್ದರಾಮಯ್ಯ ತಾಲಿಬಾನ್ ಹೇಳಿಕೆಗೆ ಸಿ ಟಿ ರವಿ ಟಾಂಗ್ ನೀಡಿದ್ಧಾರೆ.
'ಯುದ್ಧ, ಪ್ರವಾಹ ಸ್ಥಿತಿಯಲ್ಲಿದ್ದಾಗ ಬರುವವರೇ ಸಂಘದವರು. ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುತ್ತಾರೆ. ಪ್ರಾಣವನ್ನು ಒತ್ತೆ ಇಟ್ಟು ರಕ್ಷಣೆ ಮಾಡುತ್ತಾರೆ. ಆರ್‌ಎಸ್‌ಎಸ್ ನಿಸ್ವಾರ್ಥ ಸೇವೆಯನ್ನು ತಾಲಿಬಾನಿಗೆ ಹೋಲಿಸಲು ಮನಸ್ಸಾದರೂ ಹೇಗೆ ಬಂತು..? ಎಂದು ಸಿ ಟಿ ರವಿ ತಿರುಗೇಟು ನೀಡಿದ್ದಾರೆ.
ನಿಮ್ಮ ಪಕ್ಷದ ಆಡಳಿತದಲ್ಲಿ ಅಲ್ಲವೇ ಸಿದ್ದರಾಮಯ್ಯನವರೇ, ತಾಲಿಬಾನಿಗಳನ್ನು, ಐಎಸ್‌ಐ ಉಗ್ರರನ್ನು ಭಾರತದೊಳಕ್ಕೆ ನುಸುಳಲು ಬಿಟ್ಟು ಮುಂಬೈ ಹಾಗು ಇನ್ನಿತರ ಭಾಗಗಳಲ್ಲಿ ಉಗ್ರರ ದಾಳಿಯಾಗುವಂತೆ ಮಾಡಿದ್ದು? ನೂರಾರು ಮುಗ್ದರ ಸಾವಿನ ಭಾರ ನಿಮ್ಮ ಪಕ್ಷದ ಮೇಲಿರುವುದನ್ನು ಮರೆತುಬಿಟ್ಟರಾ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದ್ದಾರೆ.