ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಎಲ್ಲರಿಗೂ ಬೆಡ್, ವೆಂಟಿಲೇಟರ್ ಸಿಗುತ್ತಿಲ್ಲ. ಹಾಗಾಗಿ ಸರ್ಕಾರದ ಮಾರ್ಗಸೂಚಿ ಪ್ರಕಾರ, ಕಡಿಮೆ ಪ್ರಮಾಣದ ಕೊರೊನಾ ಸೋಂಕು ಲಕ್ಷಣ ಇದ್ದವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದಾಗಿದೆ.
ಬೆಂಗಳೂರು (ಏ. 21): ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಎಲ್ಲರಿಗೂ ಬೆಡ್, ವೆಂಟಿಲೇಟರ್ ಸಿಗುತ್ತಿಲ್ಲ. ಹಾಗಾಗಿ ಸರ್ಕಾರದ ಮಾರ್ಗಸೂಚಿ ಪ್ರಕಾರ, ಕಡಿಮೆ ಪ್ರಮಾಣದ ಕೊರೊನಾ ಸೋಂಕು ಲಕ್ಷಣ ಇದ್ದವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದಾಗಿದೆ. ಹೋಂ ಐಸೋಲೇಷನ್‌ನಲ್ಲಿದ್ದು ಆರೈಕೆ ಮಾಡಿಕೊಳ್ಳಬಹುದಾಗಿದೆ.
ಬೆಂಗಳೂರಿನಲ್ಲಿ ಎಷ್ಟೋ ಮಂದಿ ಹೋಂ ಐಸೋಲೇಷನ್ ಆಗಿದ್ದಾರೆ. ಸೋಂಕು ಲಕ್ಷಣ ಕಡಿಮೆ ಇರಬೇಕು, ರಕ್ತದಲ್ಲಿನ ಆಮ್ಲಜನಕ, ಪ್ರಮಾಣ/ ಪಲ್ಸ್ ಆಕ್ಸಿಮೀಟರ್ ವರದಿ 93 ಕ್ಕಿಂತಲೂ ಹೆಚ್ಚಿರಬೇಕು. ಮನೆಯಲ್ಲಿ ಪ್ರತ್ಯೇಕ ಕೋಣೆ ಮತ್ತು ಶೌಚಾಲಯವಿರಬೇಕು. ಹೀಗಿದ್ರೆ ಮನೆಯಲ್ಲಿಯೇ ಐಸೋಲೇಷನ್ ಆಗಬಹುದು. ಹಾಗಾದರೆ ಇದೆಷ್ಟು ಪರಿಣಾಮಕಾರಿ..?