- ಭಯಬೇಡ, ಇರಲಿ ಭರವಸೆ, ಲಸಿಕೆ ಪಡೆದವರಲ್ಲಿ ಸಾವು ಕಡಿಮೆ
- ಮೊದಲ ಅಲೆ ವೇಳೆ 10212 ಹಿರಿಯರು ಸಾವು,
- 2 ನೇ ಅಲೆಯಲ್ಲಿ 7832 ಹಿರಿಯರು ಸಾವು
ಬೆಂಗಳೂರು (ಮೇ. 22): ಲಸಿಕೆ ಬಗ್ಗೆ ಸಕಾರಾತ್ಮಕ, ನಕಾರಾತ್ಮಕ ಅಭಿಪ್ರಾಯದ ಬೆನ್ನಲ್ಲೇ ಭರವಸೆ ಮೂಡಿಸುವ ಮಾಹಿತಿಯೊಂದು ಹೊರ ಬಿದ್ದಿದೆ. ಪಡೆದವರಲ್ಲಿ ಸಾವಿನ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಮೊದಲ ಅಲೆಯಲ್ಲಿ 10212 ಹಿರಿಯರು ಸಾವನ್ನಪ್ಪಿದ್ದರು. ಅದೇ ಎರಡನೇ ಅಲೆಯಲ್ಲಿ ಈವರೆಗೆ 7832 ಮಂದಿ ಸಾವನ್ನಪ್ಪಿದ್ದಾರೆ. ಮೊದಲ ಅಲೆಯಲ್ಲಿ 50 ವರ್ಷದೊಳಗಿನ 2205 ಮಂದಿ, ಹಾಗೂ 50 ವರ್ ಮೇಲ್ಪಟ್ಟ 10, 212 ಮಂದಿ ಸಾವನ್ನಪ್ಪಿದ್ದಾರೆ. ಎರಡನೇ ಅಲೆಯಲ್ಲಿ 50 ವರ್ಷದೊಳಗಿನ 2304 ಮಂದಿ, 50 ವರ್ಷ ಮೇಲ್ಪಟ್ಟ 7832 ಮಂದಿ ಮೃತಪಟ್ಟಿದ್ದಾರೆ.