Dec 11, 2021, 12:13 PM IST
ಬೆಂಗಳೂರು(ಡಿ.11): ಬೆಂಗಳೂರು (Bengaluru) ವಿಮಾನ ನಿಲ್ದಾಣದಲ್ಲಿ (Airport) ಒಮಿಕ್ರಾನ್‌ಗೆ ಡೊಂಟ್ ಕೇರ್ ಎನ್ನುತ್ತಿದ್ದಾರಾ.. ಲಂಡನ್‌ನಿಂದ ಮರಳಿದ ಇಬ್ಬರು ಪ್ರಯಾಣಿಕರಿಗೆ ಕೋವಿಡ್ (Covid) ಇದ್ದು ಇವರನ್ನು ಅಲ್ಲಿಂದ ಯಾವುದೇ ಪಿಪಿಇ ಕಿಟ್ (PPE Kit) ಹಾಕದೆಯೇ ಕರೆ ತರಲಾಗಿದೆ. ಇತರೆ ಪ್ರಯಾಣಿಕರ ನಡುವೆಯೇ ಸೋಂಕಿತರನ್ನು ಕರೆದೊಯ್ದು ನಿರ್ಲಕ್ಷ್ಯ ಮಾಡಲಾಗಿದೆ. ಏರ್‌ಪೋರ್ಟ್ ಟರ್ಮಿನಲ್‌ನಿಂದ ಆಂಬುಲೆನ್ಸ್ ಬಳಿ ಕರೆತರಲಾಗಿದೆ. ಇತರೆ ಪ್ರಯಾಣಿಕರ ನಡುವೆಯೇ ಅವರು ಓಡಾಟ ನಡೆಸಿದ್ದಾರೆ.
High Alert in KIA Airport : ಒಮಿಕ್ರಾನ್ ಆತಂಕ : ಹೈ ರಿಸ್ಕ್ ದೇಶದ ಪ್ರಯಾಣಿಕರ ಮೇಲೆ ನಿಗಾ
ಈಗಾಗಲೇ ದೇಶದಲ್ಲಿ ಒಮಿಕ್ರಾನ್ ಆತಂಕವೂ ಇದ್ದು ಈ ರೀತಿಯಾದ ನಿರ್ಲಕ್ಷ್ಯ ದೋರಣೆ ಇನ್ನಷ್ಟು ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ. ಕೊರೋನಾ ಹೆಚ್ಚಳಕ್ಕೆ ರಹದಾರಿಮಾಡಿಕೊಟ್ಟಂತಾಗುತ್ತಿದೆ.