ಒಂದೇ ದಿನ ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಕೇಸ್, ಶುರುವಾಗಿದೆ ಮತ್ತೆ ಲಾಕ್ಡೌನ್ ಭೀತಿ

Apr 12, 2021, 11:01 AM IST

ಬೆಂಗಳೂರು (ಏ. 12): ರಾಜ್ಯದಲ್ಲಿ ಕೊರೊನಾ 2 ನೇ ಅಲೆ ಶುರುವಾಗಿದ್ದು, ನಿನ್ನೆ ಒಂದೇ ದಿನ 10 ಸಾವಿರ ಪ್ರಕರಣಗಳು ವರದಿಯಾಗಿದೆ. 40 ಮಂದಿ ಮೃತಪಟ್ಟಿದ್ದಾರೆ. ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್, ಐಸಿಯು, ವೆಂಟಿಲೇಟರ್, ಆಂಬುಲೆನ್ಸ್ ಕೊರತೆ ಕಾಣಿಸಿಕೊಂಡಿದೆ. ಕೊರೊನಾ ಅಬ್ಬರ ಹೀಗೆ ಹೆಚ್ಚುತ್ತಾ ಹೋದರೆ ಏಪ್ರಿಲ್ ಅಂತ್ಯದಿಂದ ವಾರಾಂತ್ಯದ ಲಾಕ್‌ಡೌನ್, ಆಗಲೂ ಸೋಂಕು ನಿಯಂತ್ರಣಕ್ಕೆ ಬಾರದಿದ್ದರೆ ಮೇನಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡುವ ಭೀತಿ ಎದುರಾಗಿದೆ. 

ಸ್ಯಾಲರಿ ಬೇಕೋ, ವಜಾ ಆಗ್ತೀರೋ..? ಮುಷ್ಕರಕ್ಕೆ ಮಾಸ್ಟರ್ ಸ್ಟ್ರೋಕ್ ಕೊಟ್ಟ ಸರ್ಕಾರ