BBMP 95 ವಾರ್ಡ್‌ಗಳಿಗೆ ಹರಡಿದ ಕೊರೋನಾ ಸೋಂಕು..!

Jun 11, 2020, 11:12 AM IST

ಬೆಂಗಳೂರು(ಜೂ.11): ಸಿಲಿಕಾನ್ ಸಿಟಿಯ ಜನರೇ ಎಚ್ಚರ. ಕಿಲ್ಲರ್ ಕೊರೋನಾ ಅಸಲಿ ಆಟ ಈಗ ಶುರುವಾಗಲಿದೆ. ಅಲ್ಪ ಸ್ವಲ್ಪ ಎಚ್ಚರ ತಪ್ಪಿದರೂ ಸಾಕು, ಮನೆ ಬಾಗಿಲಿಗೆ ಕೊರೋನಾ ವಕ್ಕರಿಸುವುದು ಗ್ಯಾರಂಟಿ. ಕಳೆದ 4 ದಿನದ ಕೊರೋನಾ ಲೆಕ್ಕಾಚಾರದ ಚಿತ್ರಣ ಬದಲಾಗಿದೆ.

ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಮುಂಬೈ ಸೋಂಕಿನ ಆರ್ಭಟ ಹೆಚ್ಚಾಗಿದ್ದರೆ, ಬೆಂಗಳೂರಿನಲ್ಲಿ ಮಾತ್ರ ಸ್ಥಳೀಯ ಸೋಂಕಿನದ್ದೇ ಸಿಂಹಪಾಲು. ಉದ್ಯಾನನಗರಿಯಲ್ಲಿ ನಿಧಾನವಾಗಿ ಸ್ಥಳೀಯ ಸೋಂಕು ಹಬ್ಬಲಾರಂಭಿಸಿದೆ.

ಕೊರೋನಾ ಸೇವೆ ಮಾಡುತ್ತಲೇ ಜೀವ ಬಿಟ್ಟ ವೈದ್ಯ..!

ಈಗಾಗಲೇ ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯ 95 ವಾರ್ಡ್‌ಗಳಿಗೆ ಕೊರೋನಾ ಆವರಿಸಿದೆ. ಬೆಂಗಳೂರು ನಗರದಲ್ಲಿ ಬುಧವಾರ(ಜೂ.10) ಹೊಸದಾಗಿ  42 ಕೊರೋನಾ ಕೇಸ್‌ಗಳು ಪತ್ತೆಯಾಗಿದ್ದವು. ಆ 42 ಕೇಸ್‌ಗಳ ಪೈಕಿ 33 ಕೇಸ್‌ಗಳು ಸ್ಥಳೀಯರಿಂದಲೇ ಬಂದಿದ್ದಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.