May 7, 2020, 11:32 AM IST
ಯಶವಂತಪುರ(ಮೇ.09): ದೇಶಾದ್ಯಂತ ಕೊರೋನಾ ವೈರಸ್ ತನ್ನ ಕಬಂದಬಾಹುಗಳನ್ನು ಚಾಚುತ್ತಾ ಮುನ್ನುಗ್ಗುತ್ತಿದೆ. ಹೀಗಿರುವಾಗಲೇ ಬೆಂಗಳೂರಿನ ಮತ್ತೊಂದು ಏರಿಯಾಗೆ ಕೊರೋನಾ ವೈರಸ್ ಎಂಟ್ರಿ ಕೊಟ್ಟಿದೆ. ಇದು ಸಿಲಿಕಾನ್ ಸಿಟಿ ಮಂದಿಯನ್ನು ಮತ್ತಷ್ಟು ಆತಂಕಕ್ಕೆ ಈಡು ಮಾಡಿದೆ.
ಹೌದು, ಯಶವಂತಪುರ ನಿವಾಸಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದೀಗ ಇಡೀ ಕುಟುಂಬವನ್ನು ಬಿಬಿಎಂಪಿ ಕ್ವಾರಂಟೈನ್ ಮಾಡಿದೆ. ನಗರದ ಯಶವಂತಪುರದಲ್ಲಿ ಮಗಳು, ಅಳಿಯ ಹಾಗೂ ಪತಿಯ ಜತೆ ಸೋಂಕಿತ ಮಹಿಳೆ ವಾಸವಾಗಿದ್ದರು. ಮಾರ್ಚ್ 12ರಂದು ಪಶ್ಚಿಮ ಬಂಗಾಳದಿಂದ ಬಂದಿದ್ದ ಮಹಿಳೆಗೆ ಸೋಂಕು ತಗುಲಿದೆ.
ವಿಷಾನಿಲ ಸೋರಿಕೆ, 8 ಸಾವು, 200ಕ್ಕೂ ಹೆಚ್ಚು ಮಂದಿ ಗಂಭೀರ!
ಏಪ್ರಿಲ್ 30ರಂದು ಮಹಿಳೆಗ ಜ್ವರ ಕಾಣಿಸಿಕೊಂಡಿತ್ತು. ಮೇ.01ಕ್ಕೆ ಮಂಗಳ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು, ಮೇ 05ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಈ ಕುರಿತಾದ ಸಂಪೂರ್ಣ ಡೀಟೈಲ್ಸ್ ಇಲ್ಲಿದೆ ನೋಡಿ.