ಬೆಂಗಳೂರಿನಲ್ಲಿ ಜುಲೈ ತಿಂಗಳಿನಲ್ಲಿ ಕೊರೊನಾ ಮಹಾಸ್ಫೋಟಗೊಂಡಿದೆ. ಕಳೆದ 8 ದಿನಗಳಲ್ಲಿ ದಾಖಲಾದ ಕೇಸ್ ನೋಡಿದ್ರೆ ಬೆಚ್ಚಿ ಬೀಳ್ತೀರಿ. ಬರೀ 8 ದಿನಗಳಲ್ಲಿ 7954 ಕೊರೊನಾ ಪಾಸಿಟೀವ್ ಕೇಸ್‌ಗಳು ಬಂದಿವೆ.
ಬೆಂಗಳೂರು (ಜು. 09): ಜುಲೈ ತಿಂಗಳಿನಲ್ಲಿ ಕೊರೊನಾ ಮಹಾಸ್ಫೋಟಗೊಂಡಿದೆ. ಕಳೆದ 8 ದಿನಗಳಲ್ಲಿ ದಾಖಲಾದ ಕೇಸ್ ನೋಡಿದ್ರೆ ಬೆಚ್ಚಿ ಬೀಳ್ತೀರಿ. ಬರೀ 8 ದಿನಗಳಲ್ಲಿ 7954 ಕೊರೊನಾ ಪಾಸಿಟೀವ್ ಕೇಸ್‌ಗಳು ಬಂದಿವೆ.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬುಧವಾರ ಒಂದೇ ದಿನ 2 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೇ 54 ಮಂದಿ ಸಾವನ್ನಪ್ಪಿದ್ದು ದಾಖಲೆ ಸೃಷ್ಟಿಸಿದೆ. ಇದರೊಂದಿಗೆ ಸೋಂಕು ಹಾಗೂ ಸಾವು ಎರಡರಲ್ಲೀ ಹೊಸ ದಾಖಲೆ ಸೃಷ್ಟಿಸಿದೆ.