ಟೊಯೊಟಾ ಕಾರ್ಮಿಕರ ಪ್ರತಿಭಟನೆ: ಕವರ್ ಸ್ಟೋರಿಯಲ್ಲಿ ಬಯಲಾಯ್ತು ಎಕ್ಸ್‌ಕ್ಲೂಸಿವ್ ವಿಚಾರ

Feb 20, 2021, 11:09 AM IST

ಬೆಂಗಳೂರು (ಫೆ. 20): ಟೊಯೋಟಾ ಆಡ​ಳಿತ ಮಂಡಳಿ ಹಾಗೂ ಕಾರ್ಮಿಕರ ನಡು​ವಿನ ಸಮಸ್ಯೆ ಬೇರೆ ಬೇರೆ ಸ್ವರೂಪ ಪಡೆದುಕೊಂಡಿದ್ದು, ಕಾರ್ಮಿಕರು ಪ್ರತಿಭಟನೆ ಮುಂದುವರೆಸಿದ್ದಾರೆ. 

ನ್ಯೂಸ್ ಅವರ್ : ತರಕಾರಿ ದರ ಏರಿಕೆ ಹಿಂದಿನ ಸತ್ಯ, ಟೊಯೋಟಾ ಪ್ರೊಟೆಸ್ಟ್ ಮುಗಿಯದ ಕತೆ

ಕಳೆದ 20 ವರ್ಷಗಳಿಂದ ಸಂಸ್ಥೆಗಾಗಿ ದುಡಿದು ಕ್ವಾಲಿಟಿ ಉತ್ಪಾದನೆ ನೀಡಿದ್ದೇವೆ. ಮುಂದೆಯೂ ದುಡಿಯಲು ಸಿದ್ಧರಿದ್ದೇವೆ. ಆದರೆ ಸಂಸ್ಥೆಯಲ್ಲಿ ಉತ್ಪಾದನೆಯ ಹೆಸರಲ್ಲಿ ಕಾರ್ಮಿಕರ ಶೋಷಣೆ ನಡೆಯುತ್ತಿದೆ, ಅಧಿಕ ಕಾರ್ಯಭಾರ ಒತ್ತಡದಿಂದ ಕಾರ್ಮಿಕರು ತೀವ್ರ ದೈಹಿಕ ಮತ್ತು ಮಾನಸಿಕ ಯಾತನೆ ಅನುಭವಿಸುವಂತಾಗಿದೆ. ಆಡ​ಳಿತ ಮಂಡಳಿ ಸದ್ಯ ಕಾರ್ಮಿಕರ ಸಮಸ್ಯೆ ಕೇಳುವ ಸ್ಥಿತಿಯಲ್ಲಿಲ್ಲ, ಸಮಸ್ಯೆಗಳ ಪರಿಹಾರಕ್ಕೆ ಸಮಿತಿ ರಚನೆ ಮಾಡಬೇಕು. 74 ಜನ ಕಾರ್ಮಿಕರ ಸಸ್ಪೆಂಡ್‌ ಆದೇಶವನ್ನು ಹಿಂಪಡೆಯಬೇಕು ಎಂದು ಕಾರ್ಮಿಕರು ಒತ್ತಾಯಿಸಿದ್ದಾರೆ. ಈ ಪ್ರತಿಭಟನೆ ಬಗ್ಗೆ ಕವರ್ ಸ್ಟೋರಿ ಕಾರ್ಯಾಚರಣೆ ನಡೆಸಿದಾಗ, ಕೆಲವು ವಿಚಾರಗಳು ಹೊರಬಂದಿವೆ.