Mekedatu Project: ಮೇಕೆದಾಟು, ಕಳಸಾ ಬಂಡೂರಿ ಜಲವಿವಾದಗಳ ಕುರಿತು ಇಂದು ಸಿಎಂ ಸಭೆ

Jan 22, 2022, 11:14 AM IST

ಬೆಂಗಳೂರು (ಜ. 22): ಮೇಕೆದಾಟು (Mekedatu Project) ಕಳಸಾ ಬಂಡೂರಿ (Kalasa Banduri) ಅಂತಾರಾಜ್ಯ ಜಲ ವಿವಾದ ಪ್ರಕರಣಗಳ ಕುರಿತು ಚರ್ಚಿಸುವ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ (CM Bommai) ಇಂದು  ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. 

ಮಧ್ಯಾಹ್ನ 12.30ಕ್ಕೆ ವರ್ಚುಯಲ್‌ ಸಭೆ ನಡೆಯಲಿದ್ದು, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಸೇರಿದಂತೆ ಸರ್ಕಾರದ ಅಡ್ವೋಕೇಟ್‌ ಜನರಲ್‌, ಸುಪ್ರೀಂಕೋರ್ಟ್‌ನಲ್ಲಿ ರಾಜ್ಯದ ಅಂತಾರಾಜ್ಯ ಜಲ ವಿವಾದಗಳ ಪ್ರಕರಣಗಳನ್ನು ನಿಭಾಯಿಸುವ ಹಲವು ಹಿರಿಯ ನ್ಯಾಯವಾದಿಗಳು ಭಾಗವಹಿಸಲಿದ್ದಾರೆ.

ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ ಮೇಕೆದಾಟು ಬಳಿಕ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಮಹದಾಯಿ ಯೋಜನೆ ಜಾರಿಗೆ ಒತ್ತಾಯಿಸಿ ಪಾದಯಾತ್ರೆ ನಡೆಸುವ ರಣತಂತ್ರ ರೂಪಿಸುತ್ತಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರು ನ್ಯಾಯಾಲಯದಲ್ಲಿರುವ ವಿವಿಧ ಅಂತಾರಾಜ್ಯ ಜಲ ವಿವಾದಗಳ ಪ್ರಕರಣಗಳ ಬಗ್ಗೆ ಗಂಭೀರವಾಗಿದ್ದಾರೆ ಎನ್ನಲಾಗಿದೆ.