ರಾಜ್ಯ ವಿಧಾನ ಪರಿಷತ್‌ನ 25 ಕ್ಷೇತ್ರಗಳಿಗೆ ನಡೆಯುವ ಚುನಾವಣೆಗೆ ಗೊಂದಲವಿರುವ 3-4 ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಇಂದು ಪ್ರಕಟವಾಗಲಿದೆ.
ಬೆಂಗಳೂರು (ನ. 20): ರಾಜ್ಯ ವಿಧಾನ ಪರಿಷತ್‌ನ (Legislative Council) 25 ಕ್ಷೇತ್ರಗಳಿಗೆ ನಡೆಯುವ ಚುನಾವಣೆಗೆ ಗೊಂದಲವಿರುವ 3-4 ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಇಂದು ಪ್ರಕಟವಾಗಲಿದೆ.
ಎರಡು ಅಭ್ಯರ್ಥಿ ನಿಲ್ಲಿಸಬೇಕೋ ಅಥವಾ ಒಬ್ಬರನ್ನೇ ಅಭ್ಯರ್ಥಿ ಮಾಡಬೇಕೋ ಎಂಬ ಗೊಂದಲವಿರುವ ಮೈಸೂರು-ಚಾಮರಾಜನಗರ, (Mysuru- Chamarajanagar) ಬಾಗಲಕೋಟೆ-ವಿಜಯಪುರ ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಘೋಷಣೆ ತುಸು ವಿಳಂಬವಾಗಲಿದೆ. ಉಳಿದಂತೆ ಕಾರವಾರ (Karwar) ಕ್ಷೇತ್ರದ ಅಭ್ಯರ್ಥಿ ಹೆಸರು ಸದ್ಯ ಅಮೇರಿಕಾ ಪ್ರವಾಸದಲ್ಲಿರುವ ಶಾಸಕ ಆರ್.ವಿ ದೇಶಪಾಂಡೆ ರಾಜ್ಯಕ್ಕೆ ಆಗಮಿಸಿದ ಕೂಡಲೇ ನಿರ್ಧಾರವಾಗಲಿದೆ. ಕಾಂಗ್ರೆಸ್‌ನ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯೊಂದಿಗೆ ದೆಹಲಿಗೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ.