ಬೀದರ್ (Bidar) ಪರಿಷತ್ ಅಖಾಡದಲ್ಲಿ ಸಂಬಂಧಿಕರ ನಡುವೆ ಬಿಗ್ ಫೈಟ್ ಶುರುವಾಗಿದೆ. ಬಿಜೆಪಿಯಿಂದ ಪ್ರಕಾಶ್ ಖಂಡ್ರೆ (Prakash Khandre) ಕಣಕ್ಕಿಳಿದರೆ, ಭೀಮರಾವ್ ಪಾಟೀಲ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ ಸಿಎಂ ಬೊಮ್ಮಾಯಿ ಪ್ರಚಾರಕ್ಕಿಳಿದಿದ್ದಾರೆ.
ಬೆಂಗಳೂರು (ಡಿ. 06): ಬೀದರ್ (Bidar) ಪರಿಷತ್ ಅಖಾಡದಲ್ಲಿ ಸಂಬಂಧಿಕರ ನಡುವೆ ಬಿಗ್ ಫೈಟ್ ಶುರುವಾಗಿದೆ. ಬಿಜೆಪಿಯಿಂದ ಪ್ರಕಾಶ್ ಖಂಡ್ರೆ (Prakash Khandre) ಕಣಕ್ಕಿಳಿದರೆ, ಭೀಮರಾವ್ ಪಾಟೀಲ್ (Bheemara Rao Patil) ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ ಸಿಎಂ ಬೊಮ್ಮಾಯಿ (Bommai) ಪ್ರಚಾರಕ್ಕಿಳಿದಿದ್ದಾರೆ.
ನೀವು ನಮಗೆ ಮತ ಕೊಡಿ ನಾನು ನಿಮ್ಮ ಸೇವೆ ಮಾಡುತ್ತೇನೆ. ನಿಮ್ಮ ಸೇವೆ ಮಾಡಿದರಷ್ಟೇ ಮತ್ತೆ ನಾನು ನಿಮ್ಮ ಮುಂದೆ ಬಂದು ನಿಲ್ಲುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಕಾಂಗ್ರೆಸ್ ವಯಸ್ಸಾದ ಪಕ್ಷ. ಆ ಪಕ್ಷವನ್ನು ವಿಸರ್ಜಿಸುವ ಕಾಲ ಸನ್ನಿಹಿತವಾಗಿದೆ. ಕಾಂಗ್ರೆಸ್ ಎಲ್ಲೆಡೆ ಸೋಲುತ್ತಾ ಸಾಗಿದ್ದು, ಇದೀಗ ಮಿತ್ರಪಕ್ಷಗಳೇ ಅದರ ಮೇಲೆ ವಿಶ್ವಾಸ ಮಾಡದೆ ದೂರ ಸಾಗುತ್ತಿರುವಾಗ ಜನತೆ ಹೇಗೆ ವಿಶ್ವಾಸ ಮಾಡಿಯಾರು? ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು.