Dec 1, 2020, 5:12 PM IST
ಬೆಂಗಳೂರು (ಡಿ. 01): ಧಾರವಾಡದಲ್ಲಿ ಜನಪ್ರತಿನಿಧಿಗಳಿಂದಲೇ ಭಾರೀ ಗೋಲ್‌ಮಾಲ್ ನಡೆದಿದೆ. ಪ್ರವಾಹ ಸಂತ್ರಸ್ತರ ಮನೆ ಹಂಚಿಕೆಯಲ್ಲಿ ಭಾರೀ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿದೆ. ಯಾದವಾಡ, ಲಕಮಾಪುರ ಗ್ರಾಮದಲ್ಲಿ ಹಣ ಕೊಟ್ಟವರಿಗೆ ಮಾತ್ರ ಸಿಬ್ಬಂದಿ ಹಣ ಬಿಡುಗಡೆ ಮಾಡಿದ್ದಾರೆ.
ನನ್ನ ಪರ ಅಡ್ವೋಕೇಟ್ ಜನರಲ್ ಸಮರ್ಥವಾಗಿ ವಾದ ಮಂಡಿಸಲಿಲ್ಲ ; ಎಚ್. ವಿಶ್ವನಾಥ್ ಬೇಸರ
ನಿನ್ನೆ ರಾತ್ರಿ ಧಾರವಾಡ ಸರ್ಕೀಟ್ ಹೌಸ್‌ನಲ್ಲಿ ರಾತ್ರೋ ರಾತ್ರಿ ಸಭೆ ನಡೆದಿದೆ. ಶಾಸಕ ಅಮೃತ ದೇಸಾಯಿ ಮೇಲೆ ನೀತಿ ಸಂಹಿತೆ ಉಲ್ಲಂಘನೆ ಆರೋಪವೂ ಕೇಳಿ ಬಂದಿದೆ. ಸಂತ್ರಸ್ತರಿಗೆ ಸೂರು ಒದಗಿಸಿ ಎಂದು ಸರ್ಕಾರ ಅನುದಾನ ನೀಡಿದರೆ ಜನಪ್ರತಿನಿಧಿಗಳಾಗಿ ಈ ರೀತಿ ಮಾಡುವುದು ಎಷ್ಟು ಸರಿ..? ಎಂದು ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ.