ಕೊರೋನಾ ಆತಂಕದ ನಡುವೆ ಕರ್ನಾಟಕ ಕೊಂಚ ನಿರಾಳ..!

Apr 12, 2020, 3:24 PM IST

ಬೆಂಗಳೂರು(ಏ.12): ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿರುವ ಕೊರೋನಾ ವೈರಸ್, ಭಾರತದಲ್ಲೂ ನಿಧಾನವಾಗಿ ತನ್ನ ಬೇರೂರಲು ಆರಂಭಿಸಿದೆ. ಆದರೆ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಸಮಾಧಾನಪಟ್ಟುಕೊಳ್ಳುವಂತಹ ಸುದ್ದಿಯೊಂದು ಇದೀಗ ಹೊರಬಿದ್ದಿದೆ.

"

ಮಹಾರಾಷ್ಟ್ರದಲ್ಲಿ 1700ಕ್ಕೇರಿದ ಕೊರೋನಾ ಸೋಂಕಿತರ ಸಂಖ್ಯೆ..!

ಕೊರೋನಾ ಕರ್ನಾಟಕದಲ್ಲಿ ಹಬ್ಬುತ್ತಿರುವ ವೇಗ ಕಮ್ಮಿ ಎನ್ನುವ ತುಸು ನೆಮ್ಮದಿಯ ಸುದ್ದಿ ರಾಜ್ಯದ ಜನರಿಗೆ ಸಿಕ್ಕಿದೆ. ಕೊರೋನಾ ಸೋಂಕು ದ್ವಿಗುಣಗೊಳ್ಳುವ ವಿಚಾರದಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದೆ. ಆನಂತರದ ಸ್ಥಾನದಲ್ಲಿ ತೆಲಂಗಾಣ ಹಾಗೂ ರಾಜಸ್ಥಾನಗಳು ಮೊದಲ 3 ಸ್ಥಾನಗಳನ್ನು ಹಂಚಿಕೊಂಡಿವೆ.

ಕೊರೋನಾ ವೈರಸ್‌ಗೆ ಮತ್ತೊಬ್ಬ ಖ್ಯಾತ ಚಿತ್ರನಟಿ ಹಿಲರಿ ಹೀತ್ ಬಲಿ!

ಇನ್ನು ಕರ್ನಾಟಕದ ವಿಚಾರಕ್ಕೆ ಬಂದರೆ, ಸೋಂಕು ದ್ವಿಗುಣವಾಗುವ ಸ್ಪೀಡ್‌ನಲ್ಲಿ ಕರ್ನಾಟಕ 10ನೇ ಸ್ಥಾನದಲ್ಲಿದೆ. ಹಾಗಂತ ಮನೆಯಿಂದ ಹೊರಬರಬೇಡಿ, ಸಾಮಾಜಿಕ ಅಂತರವನ್ನು ಮರೆಯದಿರಿ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.