ಕೊರೋನಾ ಕಾಟ: ರಾಜ್ಯ ಸರ್ಕಾರಕ್ಕೆ 100 ದಿನಗಳ ಟಾಸ್ಕ್..!

Aug 2, 2020, 12:23 PM IST

ಬೆಂಗಳೂರು(ಆ.02): ಕೊರೋನಾ ಅಬ್ಬರಕ್ಕೆ ಕರ್ನಾಟಕ ತತ್ತರಿಸಿ ಹೋಗುತ್ತಿದೆ. ದಿನಂಪ್ರತಿ 5 ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗಲಾರಂಭಿಸಿದೆ. ಇದರ ನಡುವೆ ಸಂಶೋಧನ ವರದಿಯೊಂದು ಹೊರಬಿದ್ದಿದ್ದು, ರಾಜ್ಯದಲ್ಲಿ ಮುಂದಿನ 100 ದಿನಗಳಲ್ಲಿ ಕೊರೋನಾ ಅಬ್ಬರ ಇರಲಿದೆ ಎಂದು ತಿಳಿಸಿದೆ.

ರಾಷ್ಟ್ರೀಯ ಸುದ್ದಿವಾಹಿನಿ ಹಾಗೂ ಪ್ರೊಟಿವಿಟಿ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಮುಂದಿನ ಮೂರು ತಿಂಗಳು ರಾಜ್ಯದ ಪಾಲಿಗೆ ಅತ್ಯಂತ ಮಹತ್ವದ್ದಾಗಿರಲಿದೆ ಎಂದಿದೆ. ಆಗಸ್ಟ್ 15ರ ವೇಳೆಗೆ ರಾಜ್ಯದಲ್ಲಿ ಕೊರೋನಾ ಸೋಂಕು ಗರಿಷ್ಠ ಮಟ್ಟಕ್ಕೆ ತಲುಪಲಿದೆ ಎನ್ನುವ ಮಾಹಿತಿಯನ್ನು ಹೊರಗೆಡವಿದೆ. 

ಕರುನಾಡಿನಲ್ಲಿ ಕೊರೋನಾ ಅಟ್ಟಹಾಸ ಇನ್ನೆಷ್ಟು ದಿನ..?

ಆಗಸ್ಟ್ 15ರಿಂದ ಸೆಪ್ಟೆಂಬರ್ ಅಂತ್ಯದ ವರೆಗೆ ಸೋಂಕು ಗರಿಷ್ಠ ಮಟ್ಟದಲ್ಲಿ ಇರಲಿದ್ದು ಆ ಬಳಿಕ ಇಳಿಮುಖವಾಗುವ ಸಾಧ್ಯತೆಯಿದೆ ಎಂದು ಉಲ್ಲೇಖಿಸಲಾಗಿದೆ. ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಲ್ಲಿ ಕೊರೋನಾ ನಿರ್ವಹಣೆ ರಾಜ್ಯಸರ್ಕಾರದ ಪಾಲಿಗೆ ಮಹತ್ವದ್ದೆನಿಸಲಿದೆ. ಈ ನೂರು ದಿನಗಳ ಟಾಸ್ಕ್ ಹೇಗಿರಲಿದೆ. ಸರ್ಕಾರ ಮಾಡಬೇಕಿರುವುದು ಏನು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.