ಆಂಬುಲೆನ್ಸ್ ಕೊರತೆ: ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಸಾವಿನ ಸಂಖ್ಯೆ

Jul 4, 2020, 11:46 AM IST

ಬೆಂಗಳೂರು(ಜು.04): ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸಾವಿನ ರಣಕೇಕೆ ಹೆಚ್ಚಾಗುತ್ತಲೇ ಇದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸೋಂಕಿತರು ದಿನಂಪ್ರತಿ ಬಲಿಯಾಗುತ್ತಿದ್ದಾರೆ. ಮುಂಬೈ, ದೆಹಲಿ ಹಾದಿಯಲ್ಲೇ ಬೆಂಗಳೂರು ಸಾಗುತ್ತಿದೆಯಾ ಎನ್ನುವ ಅನುಮಾನ ಶುರುವಾಗ ತೊಡಗಿದೆ.

ಸಿಲಿಕಾನ್ ಸಿಟಿಯಲ್ಲಿ ಗಂಟೆ ಗಂಟೆಗೆ ಕೊರೋನಾಗೆ ಒಬ್ಬೊಬ್ಬರು ಬಲಿಯಾಗುತ್ತಿದ್ದರೂ ಹೇಳುವವರಿಲ್ಲ, ಕೇಳುವವರಿಲ್ಲ ಎನ್ನುವಂತಾಗಿದೆ. ಶುಕ್ರವಾರ(ಜು.03)ದಂದು ಹನುಮಂತ ನಗರದಲ್ಲಿ ವ್ಯಕ್ತಿಯೊಬ್ಬರು ಪ್ರಾಣಬಿಟ್ಟಿದ್ದರು. ಆಂಬುಲೆನ್ಸ್‌ಗೆ ಕರೆ ಮಾಡಿ 4 ಗಂಟೆ ಕಳೆದರೂ ಯಾರೂ ಬರಲಿಲ್ಲ. ಕೊನೆಗೆ ನರಳಿ ನರಳಿ ವ್ಯಕ್ತಿ ಪ್ರಾಣ ಬಿಟ್ಟಿದ್ದಾರೆ.

ಕೊರೊನಾ ಲಕ್ಷಣಗಳಿಲ್ಲದಿದ್ದರೆ ಹೋಂ ಐಸೋಲೇಷನ್; ಆದ್ರೆ ಷರತ್ತುಗಳು ಅನ್ವಯ..!

ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಅಮಾಯಕರು ಪ್ರಾಣ ಚಲ್ಲುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಬಂದಿದ್ದರೆ ಈ ವ್ಯಕ್ತಿ ಬದುಕುಳಿಯುತ್ತಿದ್ದರು. ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮತ್ತೆಷ್ಟು ಜನ ಬಲಿಯಾಗಬೇಕೋ ಗೊತ್ತಿಲ್ಲ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.