ಇನ್ನು ಮುಂದೆ 'ಖಾಯಂ' ಬೇಡಿಕೆ ಇಡುವಂತಿಲ್ಲ ಎನ್ನುವ ಷರತ್ತಿನೊಂದಿಗೆ ರಾಜ್ಯ ಸರ್ಕಾರ ವೇತನ ಹೆಚ್ಚಳ ಮಾಡಿದೆ. ಗುತ್ತಿಗೆ ವೈದ್ಯರನ್ನು ಖಾಯಂ ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಬಾರದು ಎನ್ನುವ ಷರತ್ತು ವಿಧಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಜು.03): ಹಲವು ದಿನಗಳ ಹೋರಾಟದ ಬಳಿಕ ಕರ್ನಾಟಕ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗುತ್ತಿಗೆ ವೈದ್ಯರ ವೇತನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 45 ಸಾವಿರ ರುಪಾಯಿಗಳಿಂದ 60 ಸಾವಿರ ರುಪಾಯಿಗೆ ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ.
ಇನ್ನು ಮುಂದೆ 'ಖಾಯಂ' ಬೇಡಿಕೆ ಇಡುವಂತಿಲ್ಲ ಎನ್ನುವ ಷರತ್ತಿನೊಂದಿಗೆ ರಾಜ್ಯ ಸರ್ಕಾರ ವೇತನ ಹೆಚ್ಚಳ ಮಾಡಿದೆ. ಗುತ್ತಿಗೆ ವೈದ್ಯರನ್ನು ಖಾಯಂ ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಬಾರದು ಎನ್ನುವ ಷರತ್ತು ವಿಧಿಸಿದೆ. ಗ್ರಾಮೀಣ ಭಾಗದ ತಾಲೂಕು, ಜಿಲ್ಲಾ ಕೇಂದ್ರ, ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ವೇತನ ಹೆಚ್ಚಳವಾಗಿದೆ.
ಗುತ್ತಿಗೆ ವೈದ್ಯರ ಬೇಡಿಕೆಗಳ ಕುರಿತಂತೆ ಸುವರ್ಣ ನ್ಯೂಸ್ ನಿರಂತರವಾಗಿ ವರದಿ ಪ್ರಸಾರ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಗುತ್ತಿಗೆ ವೈದ್ಯರ ಬೇಡಿಕೆಗೆ ಸ್ಪಂದಿಸುವ ಮೂಲಕ ಸುವರ್ಣ ನ್ಯೂಸ್ ವರದಿ ಇಂಪ್ಯಾಕ್ಟ್ ಆದಂತಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.