ಸೇವೆ ಖಾಯಂಗೊಳಿಸಿ: ಸರ್ಕಾರದ ವಿರುದ್ಧ ಗುತ್ತಿಗೆ ವೈದ್ಯರ ಮುಷ್ಕರ: ಸಾಮೂಹಿಕ ರಾಜೀನಾಮೆ?

Jul 7, 2020, 11:24 AM IST

ರಾಜ್ಯದಲ್ಲಿ ಸದ್ಯ ಕೊರೋನಾ ಅಟ್ಟಹಾಸ ತಾರಕಕ್ಕೇರಿದೆ ಹೀಗಿರುವಾಗ ಗುತ್ತಿಗೆ ವೈದ್ಯರು ಸೇವೆ ಖಾಯಂಗೊಳಿಸುವಂತೆ ಸರ್ಕಾರದ ವಿರುದ್ಧ ಮುಷ್ಕರ ನಡೆಸಲು ಸಜ್ಜಾಗಿದ್ದಾರೆ. 

ಹೌದು ಸೋಮವಾರ ಕಪ್ಪುಪಟ್ಟಿ ಕಟ್ಟಿ ಕಾರ್ಯ ನಿರ್ವಹಿಸಿದ್ದ 507 ವೈದ್ಯರು ತಮ್ಮ ಮನವಿ ಆಲಿಸದ ಸರ್ಕಾರದ ವಿರುದ್ಧ ಉಪಹಾಸವಿದ್ದು ಕರ್ತವ್ಯ ನಿರ್ವಹಿಸಲು ಮುಂದಾಗಿದ್ದಾರೆ. 

ಇಷ್ಟಾದರೂ ಸರ್ಕಾರ ತಮ್ಮ ಮನವಿ ಆಲಿಸದೆ ಸೇವೆ ಖಾಯಂಗೊಳಿಸದಿದ್ದಲ್ಲಿ ಬುಧವಾರದಿಂದ ಸೇವೆಯಿಂದಲೇ ವೈದ್ಯರು ದೂರ ಉಳಿಯಲು ನಿರ್ಧರಿಸಿದ್ದಾರೆ. ಒಂದು ವೇಳೆ ಸರ್ಕಾರ ಮನವಿ ಆಲಿಸದೇ ವೈದ್ಯರು ಸೇವೆಯಿಂದ ದೂರ ಉಳಿದರೆ ಹಳ್ಳಿಗಳಲ್ಲಿ ಚಿಕಿತ್ಸೆಗೆ ಬಹಳ ಕಷ್ಟವಾಗಲಿದೆ. ಈ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ವಿಡಿಯೋ ಕ್ಲಿಕ್ ಮಾಡಿ