ಬೆಲೆ ಏರಿಕೆ ಖಂಡಿಸಿ ಸದನಕ್ಕೆ ಎತ್ತಿನಗಾಡಿ ಮೂಲಕ ಬರಲಿದ್ದಾರೆ ಡಿಕೆಶಿ, ಸಿದ್ದರಾಮಯ್ಯ

Sep 13, 2021, 10:48 AM IST

ಬೆಂಗಳೂರು (ಸೆ. 13): ತೈಲ ಬೆಲೆ, ಅಡುಗೆ ಅನಿಲ ಸಿಲಿಂಡರ್‌ ದರ ಹೆಚ್ಚಳ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ವಿನೂತನ ಪ್ರತಿಭಟನೆಗೆ ಮುಂದಾಗಿದೆ. ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಎತ್ತಿನ ಗಾಡಿಯಲ್ಲಿ ಅಧಿವೇಶನಕ್ಕೆ ಆಗಮಿಸುವ ಮೂಲಕ ಪ್ರತಿಭಟಿಸಲು ನಿರ್ಧರಿಸಿದ್ದಾರೆ.

ಕಲಬುರ್ಗಿ ಪಾಲಿಕೆ ಗುದ್ದಾಟ: ದಳದ ಬೆಂಬಲ ಕಾಂಗ್ರೆಸ್‌ಗೋ, ಜೆಡಿಎಸ್‌ಗೋ.? ಇಂದು ನಿರ್ಧಾರ

ಬೆಲೆ ಏರಿಕೆ ವಿರುದ್ಧ ‘100 ನಾಟೌಟ್‌’ ಸೇರಿದಂತೆ ಹಲವಾರು ಪ್ರತಿಭಟನೆ ನಡೆಸಿದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ದರ ಇಳಿಕೆಗೆ ಆಗ್ರಹಿಸಿ ಎತ್ತಿನಗಾಡಿ ಚಲೋ ಮೂಲಕ ಪ್ರತಿಭಟಿಸಲು ನಿರ್ಧರಿಸಿರುವುದಾಗಿ ಕಾಂಗ್ರೆಸ್‌ ಮೂಲಗಳು ತಿಳಿಸಿವೆ.