Mar 4, 2022, 6:00 PM IST
ಬೆಂಗಳೂರು (ಮಾ. 04): ಕಾವೇರಿ ಕಣಿವೆಯ ಎರಡೂವರೆ ಕೋಟಿ ಜನರಿಗೆ ನೀರುಣಿಸುವ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆ ಸಾಕಷ್ಟು ಹೈಡ್ರಾಮಗಳ ಜೊತೆ ಮುಕ್ತಾಯವಾಗಿದೆ. ಕಾಂಗ್ರೆಸ್ ಹಮ್ಮಿಕೊಂಡಿದ್ದ 140 ಕಿ.ಮೀ. ಉದ್ದದ ‘ನೀರಿಗಾಗಿ ನಡಿಗೆ’ ಪಾದಯಾತ್ರೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶಕ್ತಿ ಪ್ರದರ್ಶನದೊಂದಿಗೆ ಅಂತ್ಯಗೊಂಡಿದೆ.
Karnataka Budget 2022: ಸಿಎಂ ಬೊಮ್ಮಾಯಿ ಮಂಡಿಸಿದ ಬಜೆಟ್‌ನ ಸಂಪೂರ್ಣ ಪರಿಪಾಠ ಇಲ್ಲಿದೆ
ಜ. 9 ರಂದು ಮೇಕೆದಾಟು ಸಂಗಮ ಬಳಿ ಪ್ರಾರಂಭವಾಗಿದ್ದ 169 ಕಿ.ಮೀ. ಉದ್ದದ ಮೇಕೆದಾಟುವಿನಿಂದ ಬೆಂಗಳೂರುವರೆಗಿನ ಪಾದಯಾತ್ರೆ ಹೈಕೋರ್ಟ್ ಮಧ್ಯಪ್ರವೇಶದಿಂದ 4 ದಿನಗಳಲ್ಲೇ ರಾಮನಗರದಲ್ಲಿ ಮೊಟಕುಗೊಂಡಿತ್ತು. ಬಳಿಕ ಫೆ.27 ರಿಂದ ಎರಡನೇ ಕಂತಿನಲ್ಲಿ ರಾಮನಗರದಿಂದಲೇ ಶುರುವಾದ ಐದು ದಿನಗಳ ಪಾದಯಾತ್ರೆ 18 ವಿಧಾನಸಭೆ ಕ್ಷೇತ್ರಗಳಲ್ಲಿ 79.8 ಕಿ.ಮೀ. ಸಾಗಿ ಬೆಂಗಳೂರಿನ ಬಸವನಗುಡಿ ಕಾಲೇಜು ಮೈದಾನದಲ್ಲಿ ಸಮಾರೋಪಗೊಂಡಿತು. ಪಾದಯಾತ್ರೆಯೇನೋ ಮುಕ್ತಾಯವಾಗಿದೆ. ಇದರಿಂದ ಕಾಂಗ್ರೆಸ್‌ಗೇನು ಲಾಭ..? ಮೇಕೆದಾಟು ಯೋಜನೆ ಜಾರಿಯಾಗುತ್ತಾ.? ಒಳಸುಳಿಗಳು ಇಲ್ಲಿವೆ.