2023 ರ ಸಾರ್ವತ್ರಿಕ ಚುನಾವಣೆ (Assembly Election 2023) ಹಿನ್ನಲೆಯಲ್ಲಿ ನಾವು ಹೈಕಮಾಂಡ್ ಭೇಟಿ ಮಾಡಲು ದೆಹಲಿಗೆ ಹೋಗುತ್ತಿದ್ದೇವೆ' ಎಂದು ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು (ಫೆ. 20): 2023 ರ ಸಾರ್ವತ್ರಿಕ ಚುನಾವಣೆ (Assembly Election 2023) ಹಿನ್ನಲೆಯಲ್ಲಿ ನಾವು ಹೈಕಮಾಂಡ್ ಭೇಟಿ ಮಾಡಲು ದೆಹಲಿಗೆ ಹೋಗುತ್ತಿದ್ದೇವೆ' ಎಂದು ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರು ಹಾಗೂ ಪ್ರತಿಪಕ್ಷ ನಾಯಕರ ಬೆಂಬಲಿಗರ ನಡುವೆ ಹೊಗೆಯಾಡುತ್ತಲೇ ಇರುವ ಭಿನ್ನಾಭಿಪ್ರಾಯ, ಕೆಪಿಸಿಸಿ ಹಾಗೂ ಕಾರ್ಯಾಧ್ಯಕ್ಷರ ನಡುವೆ ಮೂಡದ ಸಮರ್ಪಕ ಹೊಂದಾಣಿಕೆಯಂತಹ ದೂರುಗಳು ದೆಹಲಿಯನ್ನು ಮುಟ್ಟಿವೆ. ಹೀಗಾಗಿ ರಾಜ್ಯದ 15 ಮಂದಿ ಪ್ರಮುಖ ನಾಯಕರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಜೊತೆಗೆ ವಿಧಾನಸಭಾ ಚುನಾವಣೆ ಸಿದ್ಧತೆಗೆ ರೂಪರೇಷೆ ಸಿದ್ಧಪಡಿಸುವ ನಿಟ್ಟಿನಲ್ಲಿ ಸಭೆ ಕರೆಯಲಾಗಿದೆ.
ಫೆ. 25ಕ್ಕೆ ದೆಹಲಿಗೆ ಆಗಮಿಸುವಂತೆ ರಾಜ್ಯ ನಾಯಕರಿಗೂ ಸೂಚನೆ ನೀಡಲಾಗಿದ್ದು, 25 ಅಥವಾ 26ಕ್ಕೆ ರಾಹುಲ್ ಗಾಂಧಿ ನೇರವಾಗಿ ಸಭೆ ನಡೆಸಬಹುದು.