Karnataka Politics: ಕಾಂಗ್ರೆಸ್‌ಗೆ ರಾಜೀನಾಮೆ, ಗೌಡರನ್ನು ಹೊಗಳಿದ ಇಬ್ರಾಹಿಂ: ಶೀಘ್ರ ಜೆಡಿಎಸ್‌ಗೆ?

Jan 28, 2022, 6:14 PM IST

ಬೆಂಗಳೂರು (ಜ. 28): ಸಿದ್ದರಾಮಯ್ಯ ಆಪ್ತ, ಕಾಂಗ್ರೆಸ್ ನಾಯಕ ಸಿ ಎಂ ಇಬ್ರಾಹಿಂ ಕಾಂಗ್ರೆಸ್ ಬಿಡುವ ಮಾತುಗಳನ್ನಾಡಿದ್ದಾರೆ. ಸಿದ್ದು ವಿರುದ್ಧವೂ ಗರಂ ಆಗಿದ್ದಾರೆ.  ‘ಕಾಂಗ್ರೆಸ್‌ಗೆ ನಾನು ಬೇಡ ಎಂಬ ತೀರ್ಮಾನವನ್ನು ಕಾಂಗ್ರೆಸ್‌ನವರು ಮಾಡಿದ್ದಾರೆ. ಹೀಗಾಗಿ ನನಗೂ ಕಾಂಗ್ರೆಸ್‌ಗೂ ಸಂಬಂಧ ಮುಗಿದಿದೆ. ಕಾಂಗ್ರೆಸ್‌ನ ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ಯಾವ ಪಕ್ಷ ಸೇರುತ್ತೇನೆ ಎಂಬುದನ್ನು ಮುಂದೆ ನೋಡಿ.’ ಪರಿಷತ್‌ ಪ್ರತಿಪಕ್ಷ ಸ್ಥಾನ ಆಕಾಂಕ್ಷಿಯಾಗಿದ್ದ ಸಿ.ಎಂ. ಇಬ್ರಾಹಿಂ ಅವರ ಆಕ್ರೋಶದ ಮಾತುಗಳನ್ನಾಡಿದ್ದಾರೆ. 

ಪ್ರತಿಪಕ್ಷ ಸ್ಥಾನಕ್ಕೆ ಬಿ.ಕೆ. ಹರಿಪ್ರಸಾದ್‌ ಅವರನ್ನು ನೇಮಕ ಮಾಡಿದ ಬೆನ್ನಲ್ಲೇ ಇಬ್ರಾಹಿಂ ಈ ರೀತಿ ಮಾತನಾಡಿ ಕಾಂಗ್ರೆಸ್‌ ತ್ಯಜಿಸುವ ಇಂಗಿತ ವ್ಯಕ್ತಪಡಿಸಿದರು. ‘ಡಿ.ಕೆ. ಶಿವಕುಮಾರ್‌, ಬಿ.ಕೆ. ಹರಿಪ್ರಸಾದ್‌ರಂತಹ ಉತ್ತಮ ಟೀಂ ರಚಿಸಿ ನನ್ನ ಮೇಲಿದ್ದ ಭಾರವನ್ನು ಸೋನಿಯಾಗಾಂಧಿ ಕಡಿಮೆ ಮಾಡಿದ್ದಾರೆ. ಈಗ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರನಾಗಿದ್ದು, ಕಾಂಗ್ರೆಸ್‌ ಬಿಟ್ಟು ಹೊರ ಬಂದಿದ್ದೇನೆ. ಈಗ ಕಾಂಗ್ರೆಸ್‌ ಈಗ ನನಗೆ ಪರಸ್ತ್ರೀ ಇದ್ದಂತೆ. ಪರಸ್ತ್ರೀ ಬಗ್ಗೆ ನಾನು ಮಾತನಾಡಲ್ಲ. ಕಾಂಗ್ರೆಸ್‌ನ ಪರಿಷತ್‌ ಸ್ಥಾನ ನನಗೆ ಬೇಡ. ಶೀಘ್ರವೇ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ’ ಎಂದಿದ್ದಾರೆ. ಹಾಗಾದರೆ ಇಬ್ರಾಹಿಂ ಮುಂದಿನ ನಡೆಯೇನು..?